ಅರಣ್ಯ ಕೃಷಿ ಪದ್ಧತಿ ಸಂವಾದದಲ್ಲಿ ಭಾಗಿ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.29.ಬೆಂಗಳೂರಿನ ಸುತ್ತೂರು ಮಠದಲ್ಲಿ ಮಂಗಳವಾರ ನಡೆದ ಅರಣ್ಯ ಕೃಷಿ ಪದ್ಧತಿ ಸಂವಾದ ಕಾರ್ಯಕ್ರಮದಲ್ಲಿ ಕಡಬ ತಾಲೂಕಿನಿಂದ ಪುತ್ತೂರು ಎ.ಪಿ.ಎಂ.ಸಿ. ಸದಸ್ಯೆ ಪುಲಸ್ತ್ಯಾ ರೈ ಹಾಗೂ ಸಾಮಾಜಿಕ ಕಾರ್ಯಕರ್ತ ಉಮೇಶ್ ಶೆಟ್ಟಿ ಪಾಲ್ಗೊಂಡು ಚರ್ಚಿಸಿದರು.


ಕಾವೇರಿ ನದಿ ಪುನಶ್ಚೇತನಕ್ಕಾಗಿ ‘ಕಾವೇರಿ ಕೂಗು’ ಅಭಿಯಾನ ಮೂಲಕ ಅಚ್ಚುಕಟ್ಟು ಪಾತ್ರದಲ್ಲಿ 242ಕೋಟಿ ಸಸಿಗಳನ್ನು ನೆಡುವ ಮಹತ್ತರ ಗುರಿಯೊಂದಿಗೆ ಹೆಜ್ಜೆ ಇಡುತ್ತಿರುವ ಈಶ ಪ್ರತಿಷ್ಠಾನದ ಸ್ಥಾಪಕ ಸದ್ಗುರು, ಆಧ್ಯಾತ್ಮಿಕ ಚಿಂತಕ ಜಗ್ಗಿ ವಾಸುದೇವ ಅವರು ಸಂವಾದವನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ನಡೆಸಿಕೊಟ್ಟರು. ಸಂವಾದದಲ್ಲಿ ರಾಜ್ಯದಲ್ಲೂ ಅರಣ್ಯ ಕೃಷಿ ಪದ್ಧತಿ ಅನುಷ್ಠಾನಗೊಳಿಸುವ ಕುರಿತು ಚರ್ಚಿಸಲಾಯಿತು ಎಂದು ಉಮೇಶ್ ಶೆಟ್ಟಿ ತಿಳಿಸಿದರು. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳೊಂದಿಗೂ ಈ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಉಪಸ್ಥಿತರಿದ್ದರು.

Also Read  ಅಧಿಕೃತ ನಿವಾಸದಲ್ಲಿ ಅಯೋಧ್ಯೆ ಎಂಡಿಎಂ ಮೃತದೇಹ ಪತ್ತೆ..!

error: Content is protected !!
Scroll to Top