ಕುಟ್ರುಪ್ಪಾಡಿ ಗ್ರಾಮ ಪಂಚಾಯತ್‍ನಲ್ಲಿ 71ನೇ ಸ್ವಾತಂತ್ಯೋತ್ಸವ



(ನ್ಯೂಸ್ ಕಡಬ) newskadaba.com ಕಡಬ, ಆ . 15,  ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ನಲ್ಲಿ 71ನೇ ಸ್ವಾತಂತ್ಯೋತ್ಸವ ನಡೆಯಿತು. ಅಧ್ಯಕ್ಷರಾದ ಶ್ರೀಮತಿ ಜಾನಕಿ ಧ್ವಜಾರೋಹಣ ನೆರವೇರಿಸಿದರು. ಸದಸ್ಯರಾದ ಶಿವ ಪ್ರಸಾದ್ ಮೈಲೇರಿ ಮತ್ತು ಮೊಹಮ್ಮದ್ ಆಲಿ ಮಾತನಾಡಿ ಸ್ವಾತಂತ್ಯೋತ್ಸವದ ಶುಭ ಹಾರೈಸಿದರು. ಹೊಸ್ಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಕರುಣಾಕರ ಗೋಕಟೆ ಶುಭ ಹಾರೈಸಿದರು. ಉಪಾಧ್ಯಕ್ಷರಾದ ಆನಂದ ಪೂಜಾರಿ, ಸದಸ್ಯರಾದ ಲಿಂಗಪ್ಪ ಗೌಡ, ಜಾನಕಿ, ತನಿಯ ಸಂಪಡ್ಕ, ಸೂಸಮ್ಮ ಮತ್ತು ಕುಟ್ರುಪ್ಪಾಡಿ ಜಿ.ಪಂ. ಮಾಜಿ ಅಧ್ಯಕ್ಷ ಶ್ರೀ ಸಂಜೀವ ಪೂಜಾರಿ , ಹಾಗೂ ಹೊಸ್ಮಠ ಶಾಲೆಯ ಮುಖ್ಯೋಪಾಧ್ಯಯರು, ಶಾಲಾ ವಿದ್ಯಾರ್ಥಿಗಳು ಈ ಸಂಧರ್ಭ ಉಪಸ್ಥಿತರಿದ್ದರು. ಪಿಡಿಒ ವಿಲ್ರ್ಫಡ್ ರೋಡ್ರಿಗಸ್ ನಿರೂಪಿಸಿ, ಸ್ವಾಗತಿಸಿ ನವಭಾರತ ನಿರ್ಮಾಣ ಸಂಕಲ್ಪ ಬೋದನೆ ಹಾಗೂ ವಂದನೆ ಮಾಡಿದರು.





error: Content is protected !!
Scroll to Top