ಪರಿಸರ ಮಾಲಿನ್ಯತಡೆಗಟ್ಟಲುಯುವಜನತೆ ಶಿಕ್ಷಣ ಸಂಸ್ಥೆಗಳ ಜೊತೆಗೆ ಸಂಶೋದನೆಯಲ್ಲಿಕೈಜೋಡಿಸಬೇಕು ➤ ಡಾ. ಎನ್ ವಿನಯ ಹೆಗ್ಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.24.ಪರಿಸರ ಮಾಲಿನ್ಯ ಇಂದಿನ ಸಮಯದಲ್ಲಿ ಮಾನವಜನಾಂಗಎದುರಿಸುತ್ತಿರುವಅತಿದೊಡ್ಡ ಸಮಸ್ಯೆಯಾಗಿದೆ. ಇದನ್ನುತಡೆಗಟ್ಟಲು ಇಂದಿನ ಯುವಜನತೆ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಶೋಧನೆಯಲ್ಲಿ ಕೈಜೋಡಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು, ಇಲ್ಲವೆಂದಾದಲ್ಲಿ ಮುಂದಿನ 50ರಿಂದ60 ವರ್ಷಗಳ ಅವಧಿಯಲ್ಲಿ ಮಾನವಜನಾಂಗ ಭೀಕರ ಪರಿಣಾಮವನ್ನುಎದುರಿಸಬೇಕಾಗಬಹುದುಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎನ್ ವಿನಯ್ ಹೆಗ್ಡೆ ತಿಳಿಸಿದರು.


ಅವರುಎನ್‍ಐಟಿಕೆಯಕೆಮಿಕಲ್‍ಇಂಜಿನಿಯರಿಂಗ್ ವಿಭಾಗವು, ವಿದ್ಯಾಸಂಸ್ಥೆಯ ವಜ್ರ ಮಹೋತ್ಸವದ ಅಂಗವಾಗಿ ‘ಪರಿಸರಮಾಲಿನ್ಯತಡೆಗಟ್ಟುವಿಕೆ ಹಾಗೂ ನಿಯಂತ್ರಣ : ಭವಿಷ್ಯದದೃಷ್ಟಿಕೋನ’ ಎಂಬ ವಿಷಯದ ಬಗ್ಗೆ ಭಾರತ ಸರಕಾರದಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ದೆಹಲಿ ಮತ್ತುಕರ್ನಾಟಕರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆಆಯೋಜಿಸಲಾದಎರಡು ದಿನಗಳ ರಾಷ್ಟ್ರೀಯವಿಚಾರ ಸಂಕಿರಣದಉದ್ಘಾಟನಾ ಸಮಾರಂಭದ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಅವರು ಪರಿಸರ ಮಾಲಿನ್ಯಅದರಲ್ಲಿಯೂ ಪ್ರಮುಖವಾಗಿಜಾಗತಿಕತಾಪಮಾನಏರಿಕೆಯಕುರಿತುತಮ್ಮ ಕಳವಳ ವ್ಯಕ್ತಪಡಿಸಿದರು.

ಈ ರೀತಿಯಾಗಿಜಾಗತಿಕತಾಪಮಾನ ಹೆಚ್ಚಳದಿಂದ ಕರಾವಳಿ ಪ್ರದೇಶಗಲುಅಪಾಯವನ್ನುಎದುರಿಸುತ್ತಿವೆ ಹಾಗೂ ಮಾಲ್ಡೀವ್ಸ್‍ನಂತಹ ದ್ವೀಪ ರಾಷ್ಟ್ರಗಳು ಪ್ರಪಂಚದ ಭೂಪಟದಿಂದಲೇ ಮರೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಪ್ರವಾಹದಕುರಿತಾಗಿ ಮಾತನಾಡುತ್ತಾ, ಇದಕ್ಕೆ ಪ್ರಮುಖವಾದಕಾರಣ ಪರಿಸರ ನಾಶ ಇದರಿಂದ ಭೂಮಿಯ ಮೇಲ್ಪದರದ ಮಣ್ಣುಗಳು ನೀರನ್ನು ಇಂಗಿಸುವ ಸಾಮಥ್ರ್ಯ ಕಳೆದು ಮೇಲ್ಪದರ ನಾಶವಾಗಿ ಪ್ರವಾಹ ಸಹಿತಭೂಕುಸಿತಗಳು ಉಂಟಾಗುತ್ತಿವೆಎಂದುಅಭಿಪ್ರಾಯಪಟ್ಟರು.

ಹವಾಮಾನ ಬದಲಾವಣೆಯಕರಿತು ಮಾತನಾಡುತ್ತಾಅವರುತಮ್ಮ ಬಾಲ್ಯದ ದಿನಗಳಲ್ಲಿ ಮಳೆಗಾಲ ಸರಿಸುಮಾರುಎಪ್ರಿಲ್ ತಿಂಗಳಿನಲ್ಲಿ ಆರಂಭಗೊಂಡು ಬಳಿಕ ಆಗಸ್ಟ್ ತಿಂಗಳಿನಲ್ಲಿ ಕ್ಷೀಣಗೊಳ್ಳುತ್ತಿತ್ತು ಆದರೆ ಈಗ ಮಳೆಗಾಲ ಜುಲೈ ತಿಂಗಳಿನಲ್ಲಿ ಅಥವಾಆಗಸ್ಟ್ ತಿಂಗಳಿನಲ್ಲಿ ಆರಂಭಗೊಳ್ಳುತ್ತಿದೆ, ಇವಲ್ಲಕ್ಕೆ ಮುಖ್ಯಕಾರಣಪರಿಸರ ನಾಶ. ಇದು ಇಂದಿನ ಕಾಲದಲ್ಲಿಯೋಚಿಸಲೇ ಬೇಕಾಗಿರುವಅಗತ್ಯ ವಿಷಯವಾಗಿದೆ. ಹಾಗಾಗಿ ಶಿಕ್ಷಣ ಸಂಸ್ಥೆಗಳು ಮುತುವರ್ಜಿ ವಹಿಸಿಕೊಂಡು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸಮಶೋಧನೆಗಳನ್ನು ಕೈಗೊಳ್ಳಬೇಕು ಮಾತ್ರವಲ್ಲ ಸಂಶೋಧನೆಯಲ್ಲಿ ವ್ಯಕ್ತವಾಗುವ ಪರಿಹಾರೋಪಾಯಗಳು ಜಾರಿಗೊಳ್ಳಬೇಕುಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎನ್‍ಐಟಿಕೆಯ ಪೂರ್ವ ನಿರ್ದೇಶಕರಾದಡಾ. ಪಿ.ಎನ್ ಸಿಂಗ್ ವಿಚಾರ ಸಂಕಿರಣದ ನಡಾವಳಿಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಇಂದಿನ ಪರಿಸರ ನಾಶ ಪರಿಸರ ನಾಶಕ್ಕೆ ಮಾನವನೇಕಾರಣ. ಮಾನವತನ್ನಆಧುನಿಕ ಬದುಕಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಪರಿಸರ ಮಾಲಿನ್ಯಕ್ಕೆಕಾರಣನಾಗುತ್ತಿದ್ದಾನೆಎಂದು ತಿಳಿಸಿದರು. ಇದೇ ಸಂಧರ್ಭದಲ್ಲಿಅವರು ವಿಚಾಅರ ಸಂಕಿರಣದಅಧ್ಯಕ್ಷರಾದ ಪ್ರೊ. ಜಿ. ಶ್ರೀನಿಕೇತನ್ ಅವರಕಾರ್ಯವನ್ನು ಶ್ಲಾಘಿಸಿ ತಮ್ಮ ಮತ್ತುಅವರ ನಡುವಿನ ಒಡನಾಟವನ್ನು ನೆನಪಿಸಿಕೊಂಡರು.


ಕಾರ್ಯಕ್ರಮದಅದ್ಯಕ್ಷತೆಯನ್ನು ವಹಿಸಿಕೊಂಡಿದ್ದ ಎನ್‍ಐಟಿಕೆ ನಿರ್ದೇಶಕರಾದ ಪ್ರ. ಉಮಾಮಹೇಶ್ವರ್‍ರಾವ್‍ಅವರು ಮಾನವ ಪ್ರಾಚೀನ ಕಾಲದಿಂದಲೂಕೂಡ ಪ್ರಕೃತಿ ಪರಿಸರದೊಂದಿಗೆ ಬೆರೆತು ಬಾಳಿ ಬದುಕುತ್ತಾ ಬಂದಿದ್ದಾನೆ. ಮಾನವನಎಲ್ಲಾ ಚಟುವಟಿಕೆಗಳು ಅಮದು ಪರಿಸರ ಸ್ನೇಹಿಯಾಗಿರುತ್ತಿದ್ದವುಆದರೆಇಂದುಎಲ್ಲವೂಕೂಡ ವಿರುದ್ದವಾಗಿದೆ.ಮಾನವತನ್ನಐಶಾರಾಮಿ ಬದುಕಿಗಾಗಿ ಪರಿಸರಕ್ಕೆತೊಂದರೆಕೊಡುತ್ತದ್ದಾನೆಇದರಿಂದತಾಪಮನ ಹೆಚ್ಚಳ, ಅರಣ್ಯ ನಾಶ, ಭೂಕುಸಿತ, ಅತಿವೃಷ್ಟಿ, ಅನಾವ್ರಷ್ಟಿಯಂತಹ ಸಮಸ್ಯೆಗಲುಕಂಡುಬರುತ್ತಿವೆ.

ಇವಕ್ಕೆಲ್ಲ ಈಗಲೆ ಪರಿಹಾರೋಪಾಯಗಳನ್ನು ಕಂಡುಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿಭೀಕರವಾದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದುಅದಕ್ಕಾಗಿ ನಾವೆಲ್ಲರೂ ಈಗಲೇ ಪರಿಸರ ಸಂರಕ್ಷಣೆಗೆಕೈಜೋಡಿಸಬೇಕುಎಂದುಅವರು ತಿಳಿಸಿದರು.ವಿಚಾರ ಸಂಕಿರಣದಲ್ಲಿ250 ಕ್ಕೂ ಮಿಕ್ಕಿ ಶೈಕ್ಷಣಿಕ, ಕೈಗಾರಿಕೋದ್ಯಮ, ಸಂಶೋಧನಾ, ಸರಕಾರಿ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದುಈ ವಿಷಯದಲ್ಲಿತಜ್ಞರಿಂದ ದಿಕ್ಸೂಚಿ ಉಪನ್ಯಾಸಗಳು, ತಾಂತ್ರಿಕ ಪ್ರಬಂಧ ಮಂಡನೆ, ‘ಪರಿಸರದಸವಾಲುಗಳಿಗಾಗಿ ಸುಸ್ಥಿರ ಪರಿಹಾರಗಳು.

ಎಂಬವಿಷಯದಬಗ್ಗೆ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸೃಜನಾತ್ಮಕ ವಿಚಾರಗಳ ಪ್ರಬಂಧ ಮಂಡನೆ, ಶಾಲಾ ಮಕ್ಕಳಿಗಾಗಿ ‘ವೆಲ್ತ್‍ಫ್ರಮ್‍ವೇಸ್ಟ್‘ ಎಂಬವಿಷಯದಬಗ್ಗೆಮಾದರಿ/ ಪೋಸ್ಟರ್ ಗಳ ಪ್ರದರ್ಶನ, ಕೈಗಾರಿಕಾ ವಸ್ತು ಪ್ರದರ್ಶನಗಳು ಜರುಗಲಿರುವುದು. ’ಪರಿಸರಮಾಲಿನ್ಯತಡೆ ಮತ್ತು ನಿಯಂತ್ರಣಕ್ಕಾಗಿ ನೀತಿಗಳು ಹಾಗೂ ವಿಧಾಯಕಗಳು’ ಎಂಬವಿಷಯದಬಗ್ಗೆಚರ್ಚೆನಡೆಯಲಿರುವುದು.ಈ ವಿಚಾರ ಸಂಕಿರಣದ ಸಮಾರೋಪ ಸಮಾರಂಭವುಆಗಸ್ಟ್25, 2019ರಂದು ಮದ್ಯಾಹ್ನ ನಡೆಯಲಿದ್ದು, ಎಂಸಿಎಫ್ ನ ನಿರ್ದೇಶಕರಾದ ಶ್ರೀ ಪ್ರಭಾಕರರಾವ್ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

error: Content is protected !!

Join the Group

Join WhatsApp Group