ಸಮೂಹ ಮಾಧ್ಯಮ ಸರ್ಟಿಫಿಕೇಟ್ಕೋರ್ಸ್ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಾವೂರು, ಆಗಸ್ಟ್.22.ಕಾವೂರಿನ ಸರಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ಮಹಿಳಾ ಅಧ್ಯಯನ ಕೇಂದ್ರ ಸಮೂಹ ಮಾಧ್ಯಮಕುರಿತು ಸರ್ಟಿಫಿಕೇಟ್‍ಕೋರ್ಸ್ ಮತ್ತು ಗೆಳತಿ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗಾಗಿ ಆಪ್ತ ಸಲಹಾ ಕೇಂದ್ರ ಸೋಮವಾರಉದ್ಫಾಟನೆಗೊಂಡಿತು.


ಸಂಸದ ಶ್ರೀ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿ, ಸರಕಾರಿಕಾಲೇಜಿನಲ್ಲಿ ಆಪ್ತ ಸಲಹಾ ಕೇಂದ್ರ, ಅಧ್ಯಯನ ಕೇಂದ್ರ ಮತ್ತು ಸಮೂಹ ಮಾಧ್ಯಮಕೋರ್ಸ್ ಆರಂಬಿಸಿರುವುದು ಶ್ಲಾಘನೀಯ ಇಂದುಇಂತಹ ಆಪ್ತ ಸಲಹಾ ಕೇಂದ್ರಗಳ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರದೊರಕುವಂತಾಗಲಿ ಎಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಅಧ್ಯಕ್ಷ ಶ್ರೀ ಶ್ರೀನಿವಾಸ್‍ಇಂದಾಜೆ ಮಾತನಾಡಿ, ಇಂದಿನ ಸಾಮಾಜಿಕಜಾಲತಾಣದ ಬೆಳವಣಿಗೆಯಿಂದ ಹಲವು ಅನಾಹುತಗಳಾಗುತ್ತಿವೆ. ವಿದ್ಯಾರ್ಥಿನಿಯರು ಈ ಬಗ್ಗೆ ಜಾಗೃತರಾಗಿರಬೇಕು. ಸಮಸ್ಯೆ ಬಂದಾಗ ಆಪ್ತ ಸಲಹಾ ಕೇಂದ್ರವನ್ನು ಉಪಯೋಗಿಸಿಕೊಳ್ಳಿ ಎಂದರು.

Also Read  ಕಡಬ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಅಧ್ಯಕ್ಷತೆ ವಹಿಸಿದ ಶಾಸಕ ಡಾ. ಭರತ್ ಶೆಟ್ಟಿ ವೈ ಮಾತನಾಡಿ, ಗೆಳತಿ ಆಪ್ತ ಸಲಹಾ ಕೇಂದ್ರದಿಂದ ವಿದ್ಯಾರ್ಥಿನಿಯರಿಗೆ ಬಹಳಷ್ಟು ಪ್ರಯೋಜನಾವಾಗಲಿದೆ.ಸಮೂಹ ಮಾಧ್ಯಮಕೋರ್ಸ್ ನಿಂದ ಇಂದಿನ ಬೆಳವಣಿಗೆಗಳ ಬಗ್ಗೆ ತಪ್ಪು ವಿಚಾರಗಳನ್ನು ಹರಡುವಕುರಿತುಎಚ್ಚರಿಕೆ ವಹಿಸಬಹುದು.ಇತರರಿಗೆಜಾಗೃತಿ ಮೂಡಿಸಬಹುದುಎಂದರು.ಪ್ರಾಂಶುಪಾಲರಾದ ಯು.ತಾರಾರಾವ್ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರದ ವಿಭಾಗದ ಶ್ರೀಮತಿ ಪ್ರಮೀಳಾ ರಾವ್ ಪ್ರಸ್ತಾವಿಸಿದರು, ಶ್ರೀ ಕುಂಚರಿಯಾ ಕೆ.ವಂದಿಸಿದರು, ಶ್ರೀಮತಿ ಪೂರ್ಣಿಮಾ ಎಂ.ನಿರೂಪಿಸಿದರು.

error: Content is protected !!
Scroll to Top