ವ್ಯಕ್ತಿ ಕಾಣೆಯಾಗಿದ್ದಾರೆ



(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.20.ಬಾಲ್ತಿಲ ಗ್ರಾಮ, ಕಡಬ ತಾಲೂಕಿನ ನಿವಾಸಿ, ಸದಾಶಿವ (ಪ್ರಾಯ 28 ವರ್ಷ) ಎಂಬವರು ಮಂಗಳೂರಿನ ಕಂಕನಾಡಿ ರೈಲ್ವೇ ಸ್ಟೇಷನ್‍ನಲ್ಲಿ ವಾಟರಿಷ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಆಗಸ್ಟ್ 16 ರಂದು ರಾತ್ರಿ 9.30 ಗಂಟೆಗೆ ತನ್ನ ರೂಮಿನಿಂದ ಕೆಲಸಕ್ಕೆಂದು ತೆರಳಿ, ಕರ್ತವ್ಯಕ್ಕೂ ಹೋಗದೇ ಕಾಣೆಯಾಗಿರುತ್ತಾರೆ ಎಂದು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








ಕಾಣೆಯಾದ ವ್ಯಕ್ತಿಯ ಚಹರೆ ಇಂತಿವೆ: ಎತ್ತರ 5.11 ಇಂಚು, ಗೋದಿ ಮೈ ಬಣ್ಣ, ಸಾಧಾರಣ ಮೈಕಟ್ಟು, ಸಾಧಾರಣ ಮೀಸೆ ಮತ್ತು ಗಡ್ಡ, ಬಲ ಕೈಯ ತೋಳಿನಲ್ಲಿ ಗಣಪತಿ ದೇವರ ಟ್ಯಾಟೋ ಮಾರ್ಕ್ ಮತ್ತು ಎಡಕೈಯ ತಟ್ಟಿನ ಮೇಲೆ ಸದಾ ಎಂಬ ಟ್ಯಾಟೋ ಮಾರ್ಕ್, ಧರಿಸಿರುವ ಬಟ್ಟೆ ಪ್ಯಾಂಟ್ ಶರ್ಟ್‍ನ ಮೇಲೆ ಕಾಫಿ ಬಣ್ಣದ ರೈನ್ ಕೋಟ್ ಧರಿಸಿರುತ್ತಾರೆ, ತಿಳಿದಿರುವ ಭಾಷೆ ಕನ್ನಡ, ತುಳು ಮಾತಾನಾಡುತ್ತಾರೆ.
ಈ ಚಹರೆಯುಳ್ಳ ವ್ಯಕ್ತಿಯ ಪತ್ತೆಯಾದಲ್ಲಿ ಕಂಕನಾಡಿ ನಗರ ಠಾಣೆ ಅಥವಾ ಕಂಟ್ರೋಲ್ ರೂಮ್‍ಗೆ ದೂರವಾಣಿ ಸಂಖ್ಯೆ 0824-2220529, 9480805354, 0824-2220800 ಮಾಹಿತಿ ನೀಡಬೇಕೆಂದು ಠಾಣಾಧಿಕಾರಿ ಕಂಕನಾಡಿ ನಗರ ಠಾಣೆ ಪ್ರಕಟಣೆ ತಿಳಿಸಿದೆ.






error: Content is protected !!
Scroll to Top