ಬಿಜೆಪಿ ವತಿಯಿಂದ ರಸ್ತೆ ದುರಸ್ಥಿಗೆ ಶ್ರಮದಾನ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.19.ಮರ್ದಾಳ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಬೂತ್ ಸಂಖ್ಯೆ 101ರಲ್ಲಿ ಆದಿತ್ಯವಾರ ಶ್ರಮದಾನದ ಮೂಲಕ ರಸ್ತೆ ದುರಸ್ಥಿಗೊಳಿಸಲಾಯಿತು.

102 ನೆಕ್ಕಿಲಾಡಿಯ ಡೆಪ್ಪುಣಿ – ಗುರಿಯಡ್ಕ ರಸ್ತೆಯು ಮಳೆಯಿಂದ ಕೆಸರುಮಯಗೊಂಡು ಸಂಚಾರಕ್ಕೆ ತೊಂದರೆಯಾಗಿತ್ತು, ಇದನ್ನು ಮನಗಂಡು ಬಿಜೆಪಿಯ ಕಾರ್ಯಕರ್ತರು ಶ್ರಮದಾನದ ಮೂಲಕ ರಸ್ತೆ ದುರಸ್ಥಿ ಮಾಡಿ ಸಂಚಾರಕ್ಕೆ ಯೋಗ್ಯವಾಗುವಲ್ಲಿ ಸಹಕರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮರ್ದಾಳ ಶಕ್ತಿ ಕೇಂದ್ರದ ಉಸ್ತುವಾರಿ ಉಮೇಶ್ ಶೆಟ್ಟಿ ಸಾಯಿರಾಂ, ಎಪಿಎಂಸಿ ಸದಸ್ಯರಾದ ಮೇದಪ್ಪ ಗೌಡ ಡೆಪ್ಪುಣಿ, ಬಾಲಕೃಷ್ಣ ಗೌಡ ಡೆಪ್ಪುಣಿ, ಜಗದೀಶ, ಸುರೇಶ್, ಚಂದ್ರಶೇಖರ, ರತನ್ ಗುರಿಯಡ್ಕ, ಹರ್ಷಿತ್ ಡೆಪ್ಪುಣಿ, ಕೌಶಿಕ್ ಡೆಪ್ಪುಣಿ, ದಿಶಾಂತ್, ಮನೀಶ್, ರೋಹನ್, ನಾರಾಯಣ ಪುಯಿಲ, ಮೋನಪ್ಪ ಗೌಡ, ಅನುದೀಪ್, ಸೂರಪ್ಪ, ಶೀನಾ ಗುರಿಯಡ್ಕ, ಕಿಟ್ಟಣ್ಣ ಮೊದಲಾದವರು ಪಾಲ್ಗೊಂಡಿದ್ದರು.

Also Read  ಬೆಳ್ತಂಗಡಿ ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯ ದೇಹದ ಗುರುತು ಪತ್ತೆ

error: Content is protected !!
Scroll to Top