ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವತಿಯಿಂದ ➤ ಶ್ರೀ ಕೃಷ್ಣ ಜನ್ಮೋತ್ಸವ ಸ್ಪರ್ಧೆಗಳ ಉದ್ಘಾಟಣಾ ಸಮಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.15.ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವತಿಯಿಂದ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ ಪೂ ಕಾಲೇಜಿನ ಸಹಯೋಗದೊಂದಿಗೆ ದಿನಾಂಕ: 17.08.2019 ಶನಿವಾರ ಪೂರ್ವಾಹ್ನ 9:30ಕ್ಕೆ ಜಿಲ್ಲಾ ಮಟ್ಟದ ಅಂತರ್ ಶಾಲಾ ಶ್ರೀ ಕೃಷ್ಣ ಜನ್ಮೋತ್ಸವ ಸ್ಪರ್ಧೆಗಳ ಉದ್ಘಾಟಣಾ ಸಮಾರಂಭವು ನಡೆಯಲಿದೆ.

ಈ ಕಾರ್ಯಕ್ರಮವನ್ನು ಮಾಜಿ ವಿಧಾನ ಪರಿಷತ್ ಸದಸ್ಯರಾಗಿರುವ ಶ್ರೀ ಬಾಲಕೃಷ್ಣ ಭಟ್ ಕೆ ನೆರೆವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗೋಪಾಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ ನಾೈಕ್ ವಹಿಸಲಿದ್ದಾರೆ. ವಿಭಾಗ 1 ರಲ್ಲಿ ‘ಮುದ್ದುಕೃಷ್ಣ’ 0-3ವ. ವೈಯಕ್ತಿಕ, ವಿಭಾಗ 2 ರಲ್ಲಿ ‘ಬೆಣ್ಣೆಕೃಷ್ಣ’ 4-5ವ. ವೈಯಕ್ತಿಕ, ವಿಭಾಗ 3ರಲ್ಲಿ ‘ಯಶೋದಾ ಕೃಷ್ಣ’ 1-4ನೇ ತರಗತಿ ಇಬ್ಬರ ತಂಡ, ವಿಭಾಗ 4 ರಲ್ಲಿ ‘ದಾಸರಕೀರ್ತನೆಗಳು’ 8 ಜನರ ತಂಡ, ವಿಭಾಗ 5 ರಲ್ಲಿ ‘ಗೋಪಿಕಾ ಕೃಷ್ಣ’ ನೃತ್ಯ 9 ಜನರ ತಂಡ.

Also Read  ಮಂಗಳೂರು: "ಕುಡ್ಲದ ಪಿಲಿ ಪರ್ಬ- 2024" ಉದ್ಘಾಟನಾ ಸಮಾರಂಭ

ವಿಭಾಗ 6ರಲ್ಲಿ ಗೀತಾ ಕಂಠಪಾಠ ಸ್ಪರ್ಧೆ 1-5ನೇ ತರಗತಿ ಧ್ಯಾನ ಶ್ಲೋಕ 1-8, 6-7ನೇ ತರಗತಿ ಅಧ್ಯಾಯ 12ರಲ್ಲಿ 1-10ನೇ ಶ್ಲೋಕ, 8-10ನೇ ತರಗತಿ ಅಧ್ಯಾಯ 15ರಲ್ಲಿ 1-10ನೇ ಶ್ಲೋಕ ಎಲ್ಲವೂ ವೈಯಕ್ತಿಕ ವಿಭಾಗ 7 ರಲ್ಲಿ ಚಿತ್ರಕಲಾ ಸ್ಪರ್ಧೆ 7-8ನೇ ತರಗತಿ ಬೆಣ್ಣೆಕೃಷ್ಣ / ಮುದ್ದು ಕೃಷ್ಣ /ಬಾಲಕೃಷ್ಣ 9-10ನೇ ತರಗತಿ ಶ್ರೀ ಕೃಷ್ಣನ ಬಾಲಲೀಲೆಗಳು – ವೈಯಕ್ತಿಕ 2.30 ಗಂ. ಕಾಲ. ವಿಭಾಗ 8 ರಲ್ಲಿ ಸಂಸ್ಕøತ ಸ್ಪರ್ಧೆಗಳು 5-7ನೇ ತರಗತಿ ಶ್ಲೋಕದ ಅರ್ಥ ವಿವರಣೆ, ಶ್ಲೋಕವನ್ನು ರಾಗವಾಗಿ ಹಾಡುವುದು, (ವೈಯಕ್ತಿಕ). 8-10ನೇ ತರಗತಿ ಸಂಸ್ಕøತ ಸಂಭಾಷಣಾ ಸ್ಪರ್ಧೆ ಇಬ್ಬರ ತಂಡ 2.30ನಿ., ಸಂಸ್ಕøತ ಕವಿಗಳ ಪರಿಚಯ ಸ್ಪರ್ಧೆ-ವೈಯಕ್ತಿಕ 4ನಿ. ಸ್ಪರ್ಧೆಗೆ ನೋಂದಣಿ ಅದೇ ದಿನ ಮಾಡಬಹುದಾಗಿದೆ.

Also Read  ಕಡಬ: ಸರಸ್ವತೀ ವಿದ್ಯಾಲಯದಲ್ಲಿ ವಿಶ್ವ ಹಿಂದಿ ದಿವಸ್ ಆಚರಣೆ

error: Content is protected !!
Scroll to Top