ಭಾರತೀಯ ಅಂಚೆ ಇಲಾಖೆ ➤ಮಕ್ಕಳ ಹಕ್ಕುಗಳು- ‘ಅಂಚೆ ಚೀಟಿ ಡಿಸೈನ್ ಸ್ಪರ್ಧೆ’

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.9.ಭಾರತೀಯ ಅಂಚೆ ಇಲಾಖೆಯು ಅಂಚೆ ಚೀಟಿ ಡಿಸೈನ್ ಸ್ಪರ್ಧೆಯನ್ನು “ಮಕ್ಕಳ ಹಕ್ಕುಗಳು” ಎಂಬ ವಿಷಯದಲ್ಲಿ 1 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದೆ. ಡಿಸೈನ್ ಸ್ವಂತದ್ದಾಗಿದ್ದು, ಸ್ಪೀಡ್ ಪೋಸ್ಟ್ ಮುಖಾಂತರ ಎ4 ಸೈಜ್ ಎನ್ವಲಪ್‍ನಲ್ಲಿ “ಮಕ್ಕಳ ದಿನಾಚರಣೆ 2019- ಸ್ಟಾಂಪ್ ಡಿಸೈನ್ ಸ್ಪರ್ಧೆ” ಎಂದು ನಮೂದಿಸಿರಬೇಕು.

ಅಸಿಸ್ಟೆಂಟ್ ಡೈರೆಕ್ಟರ್ ಜನರಲ್, ರೂಮ್ ನಂ 108, ಡಾಕ್ ಭವನ್, ಪಾರ್ಲಿಮೆಂಟ್ ರಸ್ತೆ, ದೆಹಲಿ-110001” ಈ ವಿಳಾಸಕ್ಕೆ ಸಪ್ಟೆಂಬರ್ 20 ರ ಒಳಗಡೆ ತಲುಪಿಸಬೇಕು. ಬಹುಮಾನದ ಮೊತ್ತವು ಪ್ರಥಮ ರೂ.50,000, ದ್ವೀತಿಯ ರೂ.25,000, ತೃತೀಯ 10,000 ಬಹುಮಾನಗಳು ಹಾಗೂ ರೂ 5,000 ರೂಪಾಯಿಗಳ 5 ಸಮಾಧಾನಕರ ಬಹುಮಾನಗಳನ್ನು ಒಳಗೊಂಡಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group