(ನ್ಯೂಸ್ ಕಡಬ) newskadaba.comಕಲ್ಲುಗುಡ್ಡೆ, ಆಗಸ್ಟ್.7.ನೂಜಿಬಾಳ್ತಿಲ ರೆಂಜಿಲಾಡಿ ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿಯನ್ನು ಆದಿತ್ಯವಾರ ಕಲ್ಲುಗುಡ್ಡೆಯಲ್ಲಿ ನಡೆದ ಸಭೆಯಲ್ಲಿ ರಚಿಸಲಾಯಿತು.
ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿಯ ಅಧ್ಯಕ್ಷರಾಗಿ ಜಯಂತ್ ಬರೆಮೇಲು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಯಪ್ರಕಾಶ್ ಶಾಂತಿಗುರಿ, ಕಾರ್ಯದರ್ಶಿಯಾಘಿ ಯೋಗೀಶ್ ಹಳೆನೂಜಿ, ಜೊತೆಕಾರ್ಯದರ್ಶಿಯಾಗಿ ದಿನೇಶ್ ಕಾನ, ಕೋಶಾಧಿಕಾರಿಯಾಗಿ ಪುರುಷೋತ್ತಮ ಕುಕ್ಕುತ್ತಡಿ ಇವರುಗಳು ಆಯ್ಕೆಯಾಗದ್ದಾರೆ. ಆಗಸ್ಟ್ 25ರಂದು ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ನೂಜಿಬಾಳ್ತಿಲ ಕಲ್ಲುಗುಡ್ಡೆ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಗುವುದು ಹಾಗೂ ಈ ಪ್ರಯುಕ್ತ ಮೊಸರು ಕುಡಿಕೆ, ಕಬಡ್ಡಿ, ಹಗ್ಗಜಗ್ಗಾಟ, ತ್ರೋಬಾಲ್ ಸ್ಪರ್ದೆ ಏರ್ಪಡಿಸಲಾಗುವುದೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.