ಕಲ್ಲುಗುಡ್ಡೆ: ಎಸ್.ಅಂಗಾರರಿಗೆ ಸಚಿವ ಸ್ಥಾನ ಸಿಗಲೆಂದು ವಿಶೇಷ ಪ್ರಾರ್ಥನೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆಗಸ್ಟ್.6.ಸುಳ್ಯ ಶಾಸಕ ಎಸ್.ಅಂಗಾರ ರವರಿಗೆ ಸಚಿವ ಸ್ಥಾನ ಸಿಗಲೆಂದು ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಸೋಮವಾರ ವಿಶೇಷ ಪ್ರಾರ್ಥನೆ ಮಾಡಲಾಯಿತು.


ಬಿ.ಎಸ್.ಯಡಿಯೂರಪ್ಪ ನವರು ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ, ವಿಶ್ವಾಸಮತ ಸಾಭೀತುಪಡಿಸಿದ್ದು, ಮುಂದೆ ನಡೆಯುವ ಸಚಿವ ಸಂಪುಟ ರಚನೆಯಲ್ಲಿ ಸುಳ್ಯ ಕ್ಷೇತ್ರದ ಶಾಸಕರಾಗಿರುವ ಎಸ್.ಅಂಗಾರ ರವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲೆಂದು ರೆಂಜಿಲಾಡಿ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಅರ್ಚಕರಾದ ರವಿ ಹೆಬ್ಬಾರ್ ಪೂಜಾ ವಿಧಿ ವಿಧಾನಗಳನ್ನು ನೆರವೇರಸಿದರು. ಕೃಷ್ಣ ಹೆಬ್ಬಾರ್ ಸಹಕರಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಗೌಡ ಎಳುವಾಳೆ, ಪ್ರಮುಖರಾದ ಉಮೇಶ್ ಶೆಟ್ಟಿ ಸಾಯಿರಾಂ, ವಿಜಯಕುಮಾರ್ ಕೇಪುಂಜ, ಯಶೋಧರ ಗೌಡ, ಜಯಂತ್ ಬರೆಮೇಲು, ಅಶೋಕ್ ಜೈನ್, ವಾಸುದೇವ ಕೇಪುಂಜ, ಉಮೇಶ್ ಜಾಲು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Also Read  ಪುತ್ತೂರು ಡೆಂಗ್ಯೂ ಜ್ವರಕ್ಕೆ ಬಲಿಯಾದ ವಿವಾಹಿತ ಮಹಿಳೆ

error: Content is protected !!
Scroll to Top