ಮೀನುಗಾರಿಕಾ ಕಾಲೇಜು : “ಸ್ವಚ್ಚತಾ ಪಕ್ವಾಡ” ➤ ಕಾರ್ಯಕ್ರಮಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.3.ನಗರದ ಎಕ್ಕೂರಿನ ಸಮೀಪವಿರುವ ಮತ್ಸ್ಯನಗರ ಕ್ಯಾಂಪಾಸ್‍ನ ಮೀನುಗಾರಿಕಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಎನ್ನೆಸ್ಸೆಸ್‍ನ 50ನೇ ವರ್ಷದ ಸಮಾರಂಭದ ಹಿನ್ನೆಲೆಯಲ್ಲಿ ಗುರುವಾರ ಸ್ವಚ್ಚತಾ ಪಕ್ವಾಡ ಕಾರ್ಯಕ್ರಮಕ್ಕೆ ಚಾಲನೆ ನೀಡಿತು.

ಕೇಂದ್ರ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದ ಎನ್ನೆಸ್ಸೆಸ್ ನಿರ್ದೇಶನಾಲಯವು ಬಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರ ಮಾರ್ಗದರ್ಶನದಂತೆ ಜಾರಿಗೊಳಿಸಿದ ಈ ಕಾರ್ಯಕ್ರಮವನ್ನು ಆಗಸ್ಟ್ 1 ರಿಂದ 15 ರವರೆಗೆ ನಡೆಸಲು ಸಜ್ಜುಗೊಳಿಸಲಾಯಿತು. ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಕಾಲೇಜಿನ ಮಾಜಿ ಡೀನ್ ಹಾಗೂ ಪ್ರಾಧ್ಯಾಪಕ ಡಾ. ಎಸ್.ಎಂ. ಶಿವಪ್ರಕಾಶ್ ರವರು ಸ್ವಚ್ಚತೆಯ ಕಡೆಗೆ ನಾವೆಲ್ಲರೂ ಗಮನ ಹರಿಸುವುದೇ ಆದರೆ ನಾವು ವಾಸಿಸುವ ಪ್ರದೇಶವನ್ನು ಸುಂದರಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಹೇಳಿದರು.

ಕಾಲೇಜನ್ನು ಪ್ಲಾಸ್ಟಿಕ್ ಮುಕ್ತವಾಗಿಸುವುದು, ಹಸಿರು ಕ್ಯಾಂಪಾಸ್ ಮಾಡಲು ಸುಲಭವಾಗುವುದೆಂದರು. ಮಹಾತ್ಮ ಗಾಂಧಿ ಯವರ ಕನಸಾದ ಸ್ವಚ್ಚ ಭಾರತ ಅಭಿಯಾನದ ಈ ಯೋಜನೆಯು ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಚಿಂತನೆಯಂತೆ ನಾವೆಲ್ಲಾ ವಾಸಿಸುವ ಮನೆ, ವಿದ್ಯಾಮಂದಿರ, ಶಾಲೆ, ಕಾಲೇಜು, ಕಛೇರಿ, ವಿದ್ಯಾಸಂಸ್ಥೆಗಳ ಪ್ರಯೋಗಾಲಯಗಳು, ತರಗತಿ ಕೊಠಡಿಗಳು, ಗ್ರಂಥಾಲಯಗಳು, ಹಾಸ್ಟೆಲ್ ಗಳು, ಇತ್ಯಾದಿಗಳನ್ನು ಶುಭ್ರವಾಗಿ ಕಾಪಾಡುವ ನಿಟ್ಟಿನಲ್ಲಿ ಈ ಸ್ವಚ್ಚತಾ ಪಕ್ವಾಡ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಎನ್ನೆಸ್ಸೆಸ್‍ನ ಕಾರ್ಯಕ್ರಮಾಧಿಕಾರಿ ಹಾಗೂ ಕಾಲೇಜಿನ ಪ್ರಾಧ್ಯಾಪಕ ಡಾ. ಎ.ಟಿ ರಾಮಚಂದ್ರ ನಾಯ್ಕ ಪ್ರಾಸ್ಥಾವಿಕಾ ಭಾಷಣದಲ್ಲಿ ತಿಳಿಸಿದರು.

Also Read  ಸವಣೂರು: 40,000 ರೂ. ಮೌಲ್ಯದ ಚಿನ್ನಾಭರಣ ಕಳವು

ನಾವು ವಾಸಿಸುವ ಪರಿಸರ ಮಾಲಿನ್ಯವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ತ್ಯಾಜ್ಯಗಳನ್ನು ವಿಲೇವಾರಿ ಮಾಡುವಾಗ ಅದರಲ್ಲೂ ಪ್ಲಾಸ್ಟಿಕನ್ನು ನಿಸರ್ಗಕ್ಕೆ ವರ್ಗಾಯಿಸುವಾಗ ಅತೀ ಜಾಗರೂಕರಾಗಿರಬೇಕು. ಪ್ಲಾಸ್ಟಿಕಿನಿಂದ ಅಪಾರ ಹಾನಿಯಾಗುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಬೃಹತ್ ಯೋಜನೆಯನ್ನು ರೂಪಿಸಿದೆಯೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಡೀನ್ ಡಾ. ಎ. ಸೆಂಥಿಲ್ ವೆಲ್ ರವರು ಎನ್ನೆಸ್ಸೆಸ್‍ನಂತಹ ಕೇಂದ್ರ ಸರ್ಕಾರದ ಯೋಜನೆ ಅತ್ಯುತ್ತಮವಾದ ಕೆಲಸ ಕಾರ್ಯಗಳನ್ನು ಮಾಡುತ್ತಿದೆ.

Also Read  ಪಂಜ: ದೇವಿಪ್ರಾಸಾದ್‌ ಚಿಕ್ಮುಳಿಯರಿಗೆ ಸಾಧನಾಶ್ರೀ ಪ್ರಶಸ್ತಿ

ಈ ಯೋಜನೆಯು ಕಾಲೇಜು ಮಟ್ಟದಲ್ಲಿ ಪ್ರಚಲಿತವಾಗಿದ್ದು, ಎಲ್ಲಾ ಯುವವಿದ್ಯಾರ್ಥಿಗಳು ಇದರಲ್ಲಿ ಭಾಗವಸಿ ಶ್ರಮವಹಿಸುತ್ತಿದ್ದಾರೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡಿರಬೇಕೆಂದರು. ಭೋದಕರಿಗೆ, ನೌಕರರಿಗೆ ಮತ್ತು ನಾಗರಿಕರಿಗೆ ಭಾರತದ ಪಿತಾಮಹ ಮಹಾತ್ಮಗಾಂಧಿಯವರ ಕನಸಾದ ಸ್ವಚ್ಚ ಭಾರತ ಅಭಿಯಾನದ ಬಗ್ಗೆ ಪ್ರತಿಯೊಬ್ಬರು ಸ್ವಇಚ್ಚೆಯಿಂದ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಡುವುದು ಎಲ್ಲರ ಜವಾಬ್ದಾರಿಯಾಗಿರುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

error: Content is protected !!
Scroll to Top