ಪಿಲಿಕುಳ ಆಟಿಕೂಟ ➤ ವಿಶೇಷ ಭೋಜನ ಸಾರ್ವಜನಿಕರಿಗೆ ಕೂಪನ್ ವ್ಯವಸ್ಥೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.30.ಪಿಲಿಕುಳದ ಗುತ್ತು ಮನೆಯಲ್ಲಿ ಆಗಸ್ಟ್ 4 ರಂದು ಪೂರ್ವಾಹ್ನ 10 ಗಂಟೆಯಿಂದ ಪಿಲಿಕುಳ ಆಟಿಕೂಟವನ್ನು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳೊಂದಿಗಗೆ ಆಯೋಜಿಸಲಾಗಿದೆ.


ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರಾದ ಸೀತಾರಾಮ್ ಕುಮಾರ್ ಕಟೀಲ್ ಇವರ ಸಾರಥ್ಯದಲ್ಲಿ “ಯಕ್ಷ, ನೃತ್ಯ ಮತ್ತು ಹಾಸ್ಯ ವೈಭವ” ಮತ್ತು ಮಂಗಳೂರು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದವರಿಂದ ಆಟಿಯ ವಿಶೇಷ ತಿಂಡಿ ತಿನಿಸುಗಳ ಪ್ರದರ್ಶನವೂ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಪಿಲಿಕುಳದ ವತಿಯಿಂದ ಆಟಿಯ ನಾನಾ ಬಗೆಯ ಖಾದ್ಯಗಳೊಂದಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.

Also Read  ಸುಳ್ಯ: ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಸಜ್ಜನೋತ್ಸವ ಹಾಗೂ ನೂತನ ಸಭಾಭವನ ಉದ್ಘಾಟನೆ

ಈ ವಿಶೇಷ ಭೋಜನದ ಕೂಪನುಗಳನ್ನು ಮಂಗಳೂರಿನ ಮಿನಿವಿಧಾನ ಸೌಧದ ಹಿಂಭಾಗದ ಸರ್ಕಾರಿ ನೌಕರರ ಭವನದ ಒಂದನೇ ಮಹಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ((National Highway) ಕಚೇರಿಯಲ್ಲಿ, ಮಲ್ಲಿಕಟ್ಟೆ ಪರಂಪರಾ ಮಳಿಗೆಯಲ್ಲಿ ಹಾಗೂ ಪಿಲಿಕುಳದ ಮುಖ್ಯದ್ವಾರದ ಬಾಕ್ಸ್ ಆಫೀಸಿನಲ್ಲಿ ಇಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top