ಮಂಗಳೂರು ವಿಶ್ವವಿದ್ಯಾನಿಲಯ ➤ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.13.ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ/ ಸ್ನಾತಕೋತ್ತರ ಕೇಂದ್ರ, ಚಿಕ್ಕ ಅಳುವಾರ/ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು/ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು ಮಂಗಳೂರು, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮಡಿಕೇರಿಯಲ್ಲಿನ ಸ್ನಾತಕೋತ್ತರ ಕೋರ್ಸುಗಳಿಗೆ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.


ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು 55% ಅಂಕಗಳೊಂದಿಗೆ ಪಡೆದ ಅರ್ಹ ಅಭ್ಯರ್ಥಿಗಳು ಜುಲೈ 15 ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ವೆಬ್‍ಸೈಟ್ www.mangaloreuniversity.ac.in ನಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ದಾಖಲೆಗಳ ಜೆರಾಕ್ಸ್ ಪ್ರತಿಯೊಂದಿಗೆ ಕುಲಸಚಿವರ ಕಚೇರಿಗೆ ಸಲ್ಲಿಸಬೇಕು.ಆಯ್ಕೆಯಾದ ಅಭ್ಯರ್ಥಿಗಳು ವಿಶ್ವವಿದ್ಯಾನಿಲಯದ ಆವರಣ/ಸ್ನಾತಕೋತ್ತರ ಕೇಂದ್ರ/ಘಟಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರಬೇಕು, ಈಗಾಗಲೇ ಬೋಧಕರಾಗಿ ಪದವಿ ಅಥವಾ ಸ್ನಾತಕೋತ್ತರ ಮಟ್ಟದಲ್ಲಿ ಸೇವೆ ಸಲ್ಲಿಸಿದ್ದಲ್ಲಿ, ಸೇವಾನುಭವದ ಪ್ರಮಾಣ ಪತ್ರವನ್ನು ಸಂದರ್ಶನದಂದು ಹಾಜರುಪಡಿಸಬೇಕು.

ಅಭ್ಯರ್ಥಿಗಳು ಅರ್ಜಿಯ ಒಂದು ಪ್ರತಿ ಮತ್ತು ದಾಖಲೆಗಳ ಜೆರಾಕ್ಸ್ ಪ್ರತಿ ಹಾಗೂ ಮೂಲದಾಖಲೆಗಳೊಂದಿಗೆ ಎನ್.ಇ.ಟಿ./ಎಸ್.ಎಲ್.ಇ.ಟಿ. ಉತ್ತೀರ್ಣತೆ/ಎಂ.ಫಿಲ್/ಪಿ.ಹೆಚ್.ಡಿ. ಪದವಿ ಪ್ರಮಾಣ ಪತ್ರ) ಕುಲಸಚಿವರ ಕಚೇರಿ, ಆಡಳಿತ ಸೌಧ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ ಇಲ್ಲಿಗೆ ಈ ಕೆಳಗಿನ ದಿನಾಂಕದಂದು ಸಂದರ್ಶನಕ್ಕೆ ಭಾಗವಹಿಸಬಹುದು. ಜುಲೈ 17 ರಂದು ಬೆಳಿಗ್ಗೆ 9 ಗಂಟೆಯಿಂದ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ , ಸಮಾಜಶಾಸ್ತ್ರ, ಮಧ್ಯಾಹ್ನ 1 ಗಂಟೆಯಿಂದ ಸಮಾಜಕಾರ್ಯ, ಪತ್ರಿಕೋದ್ಯಮ, ದೈಹಿಕ ಶಿಕ್ಷಣ (MPED/BPED), ಜುಲೈ 18 ರಂದು ಬೆಳಿಗ್ಗೆ 9 ಗಂಟೆಯಿಂದ ಕನ್ನಡ, ತುಳು, ಹಿಂದಿ, ಮಧ್ಯಾಹ್ನ 1 ಗಂಟೆಯಿಂದ ಇಂಗ್ಲೀಷ್, ಕೊಂಕಣಿ.

Also Read  ಬೈಕ್ ಮತ್ತು ಕಾರು ಡಿಕ್ಕಿ..!    ಯುವಕ ಮೃತ್ಯು..!               

ಜುಲೈ 20 ರಂದು ಬೆಳಿಗ್ಗೆ 9 ಗಂಟೆಯಿಂದ ಭೌತಶಾಸ್ತ್ರ, ಮೆಡಿಕಲ್ ಫಿಸಿಕ್ಸ್, ವಸ್ತು ವಿಜ್ಞಾನ, ಇಲೆಕ್ಟ್ರಾನಿಕ್ಸ್ ,ಗಣಿತಶಾಸ್ತ್ರ ಅಪರಾಹ್ನ 1 ಗಂಟೆಯಿಂದ ರಸಾಯನಶಾಸ್ತ್ರ , ಕೈಗಾರಿಕಾ ರಸಾಯನಶಾಸ್ತ್ರ , ಜೀವರಸಾಯನ ಶಾಸ್ತ್ರ , ಸಂಖ್ಯಾಶಾಸ್ತ್ರ ,ಯೋಗ ವಿಜ್ಞಾನ ಜುಲೈ 22 ರಂದು ಬೆಳಿಗ್ಗೆ 9 ಗಂಟೆಯಿಂದ ಆನ್ವಯಿಕ ಸಸ್ಯಶಾಸ್ತ್ರ, ಆನ್ವಯಿಕ ಪ್ರಾಣಿಶಾಸ್ತ್ರ, ಜೀವ ವಿಜ್ಞಾನ, ಬಯೋಟೆಕ್ನಾಲಜಿ ಸೂಕ್ಷ್ಮಾಣುಜೀವ ವಿಜ್ಞಾನ (Microbiology), ಫುಡ್ ಸಾಯನ್ಸ್ ಆ್ಯಂಡ್ ನ್ಯೂಟ್ರೀಷನ್, ಅಪರಾಹ್ನ 1 ಗಂಟೆಯಿಂದ ಪರಿಸರ ವಿಜ್ಞಾನ (Environmental Science), ಜಿಯೋಇನ್ಫಾರ್ಮೆಟಿಕ್ಸ್(Geo Informatics), ಭೂಗೋಳಶಾಸ್ತ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ (Library And Information Science),ಗಣಕ ವಿಜ್ಞಾನ.

Also Read  ಬಂಟ್ವಾಳ : ಗಾಂಜಾ ಹೊಂದಿದ್ದ ಆರೋಪಿಯ ಅರೆಸ್ಟ್

ಜುಲೈ 23 ರಂದು ಬೆಳಿಗ್ಗೆ 9 ಗಂಟೆಯಿಂದ ವಾಣಿಜ್ಯ ಶಾಸ್ತ್ರ ಮತ್ತು ಮ್ಯಾನೆಜ್‍ಮೆಂಟ್/MHRD ಜುಲೈ 24 ರಂದು ಬೆಳಿಗ್ಗೆ 9 ಗಂಟೆಯಿಂದ ವ್ಯವಹಾರ ಆಡಳಿತ (MBA), ಪ್ರವಾಸೋದ್ಯಮ ಆಡಳಿತ (MTA), ವ್ಯವಹಾರ ಆಡಳಿತ (MBA (IB)).ನಮೂದಿಸಿದ ದಿನಾಂಕಗಳಂದು ನಡೆಯಲಿರುವ ನೇರ ಸಂದರ್ಶನಕ್ಕೆ ಹಾಜರಾಗಬೇಕು. ಎನ್.ಇ.ಟಿ./ಎಸ್.ಎಲ್.ಇ.ಟಿ. ಉತ್ತೀರ್ಣತೆ/ಪಿ.ಹೆಚ್.ಡಿ. ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top