ಜಿಲ್ಲಾ ಮಟ್ಟದ ವಾರ್ಷಿಕ ಮಹಾಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.9.ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘ ಮಂಗಳೂರು ಇದರ ಜಿಲ್ಲಾ ಮಟ್ಟದ ವಾರ್ಷಿಕ ಮಹಾಸಭೆ ಹಾಗೂ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಸರಕಾರಿ ವಾಹನ ಚಾಲಕರಿಗೆ ಸನ್ಮಾನ ಸಮಾರಂಭವು ಸಂಘದ ಆದ್ಯಕ್ಷ ಅರುಣಕಾಂತ್ ಅವರ ಅಧ್ಯಕ್ಷತೆಯಲ್ಲಿ ಜೂನ್ 7 ರಂದು ಸಂಘದ ಕಚೇರಿಯಲ್ಲಿ ನಡೆಯಿತು.

ಸಂಘದ ಕಾರ್ಯದರ್ಶಿ ಕೆ ಬಾಲಕೃಷ್ಣ ಹಿಂದಿನ ಸಭೆಯ ನಡಾವಳಿಯನ್ನು ಮಂಡಿಸಿದರು. ಉಪಾಧ್ಯಕ್ಷ ಪೌಲ್ ಡಿಸೋಜ ಲೆಕ್ಕಪತ್ರಗಳನ್ನು ಮಂಡಿಸಿದರು.ಸಂಘದ ಮಾಜಿ ಅಧ್ಯಕ್ಷ ಬಿ ವಿಶ್ವನಾಥ ಶೆಟ್ಟಿ ಮಾತನಾಡಿ ನಿವೃತ್ತರಾದ ವಾಹನ ಚಾಲಕರನ್ನು ಸಂಘದ ಅಜೀವ ಸದಸ್ಯರನ್ನಾಗಿ ಮಾಡುವುದರಿಂದ ಸಂಘದ ಚಟುವಟಿಕೆ ಹಾಗೂ ಅಭಿವೃದ್ಧಿಯಲ್ಲಿ ಅನುಕೂಲವಾಗುತ್ತದೆ ಎಂದರು. ಗ್ರೂಫ್ ಡಿ ನೌಕರರ ಸಂಘದ ಅಧ್ಯಕ್ಷ ಫ್ರಾಂಕಿ ಪ್ರಾನ್ಸಿಸ್ ಇವರು ಮಾತನಾಡಿ ಸರಕಾರಿ ವಾಹನ ಚಾಲಕರ ಸಂಘ ಹಾಗೂ ಗ್ರೂಫ್ ಡಿ ಸಂಘ ಉತ್ತಮ ಬಾಂದವ್ಯವನ್ನು ಹೊಂದಿದ್ದು ಸರಕಾರದ ಮಟ್ಟದಲ್ಲಿ ನೌಕರರ ಸಮಸ್ಯೆಗಳ ಹೋರಾಟಕ್ಕೆ ಬಲ ಸಿಕ್ಕಂತಾಗಿದೆ.

Also Read  ಪರ್ವತಾರೋಹಿಯ ಪದ್ಮಶ್ರೀ ಪ್ರಶಸ್ತಿ ಕದ್ದೊಯ್ದ ಕಳ್ಳರು ➤ ಠಾಣೆಯಲ್ಲಿ ದೂರು ದಾಖಲು

ವಾಹನ ಚಾಲಕರಾಗಿ ಸೇವೆಯಿಂದ ನಿವೃತ್ತಿಗೊಂಡ ಮಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಸೋಮಶೇಕರ್, ಎಂ.ಸಿ ದೇವಪ್ಪ, ಎಂಪಿ ವಾಸು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಜನಾರ್ಧನ ಕೆ ಇವರನ್ನು ಅತಿಥಿಗಳು ಸನ್ಮಾನಿಸಿದರು.ಸಂಘದ ಕಾರ್ಯದರ್ಶಿ ಕೆ ಬಾಲಕೃಷ್ಣ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಪುರುಷೋತ್ತಮ ವಂದಿಸಿದರು. ಕರಾವಳಿ ಕಾವಲು ಪೊಲೀಸ್ ಕಂಟ್ರೋಲ್ ರೂಂ ಉಪನಿರೀಕ್ಷಕ ಬಿ ಮನಮೋಹನ ರಾವ್ ನಿರೂಪಿಸಿದರು.

Also Read  ಕದಂಬ ಹಿತರಕ್ಷಣಾ ಸಂಘಟನೆಯಿಂದ ರಕ್ತದಾನ ಶಿಬಿರ ► 108 ಆಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ಸನ್ಮಾನ

error: Content is protected !!