ನೂಜಿಬಾಳ್ತಿಲದ ದಿಲೀಪ್ ಕವಿವೃಕ್ಷ ಬಳಗದ ಜಿಲ್ಲಾಧ್ಯಕ್ಷನಾಗಿ ಆಯ್ಕೆ

(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಜುಲೈ.8.ರಾಜ್ಯ ಕವಿವೃಕ್ಷ ಬಳಗದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷನಾಗಿ ಯುವ ಕವಿ ನೂಜಿಬಾಳ್ತಿಲ ಗ್ರಾಮದ ದಿಲೀಪ್ ವೇದಿಕ್ ಕಡಬ ಆಯ್ಕೆಯಾಗಿದ್ದಾರೆ.

ಯುವ ಕವಿ, ಸಾಹಿತಿಯಾಗಿರುವ ದಿಲೀಪ್ ವೇದಿಕ್ ಇವರು ಕವಿ, ಕಥೆಗಾರ, ಗಾಯಕ, ವಾಗ್ಮಿಯಾಗಿ, ಕರ್ನಾಟಕ ಹಾಗೂ ಕೇರಳ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸುವ ಜತೆಗೆ ಈಗಾಗಲೇ ಹಲವಾರು ಕೃತಿ, ಕವನಗಳನ್ನು ರಚಿಸಿದ್ದಾರೆ. ಇವರು ದ.ಕ. ಜಿಲ್ಲಾ ಕವಿ ಬಳಗ ಮತ್ತು ಅಕಾಡೆಮಿಯ ಸದಸ್ಯರಾಗಿದ್ದರು. ಇದೀಗ ಇವರನ್ನು ಕವಿವೃಕ್ಷ ಬಳಗದ ದ.ಕ. ಜಿಲ್ಲಾಧ್ಯಕ್ಷರನ್ನಾಗಿ ಕವಿ ಬಳಗದ ರಾಜ್ಯಧ್ಯಕ್ಷರು ಆಯ್ಕೆ ಮಾಡಿದ್ದಾರೆ.

Also Read  ಅಕ್ರಮ ಗಣಿಗಾರಿಕೆ ಮೇಲೆ ಅಧಿಕಾರಿಗಳ ದಾಳಿ ➤ 30 ಲಾರಿ 5 ಜೆಸಿಬಿ ಸೀಜ್

ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಕಿರಿಯ ವಯಸ್ಸಿನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದವರೂ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ. ದಿಲೀಪ್ ವೇದಿಕ್ ರವರು ಪ್ರಸ್ತುತ ಕಡಬ ಸೈಂಟ್ ಜೋಕಿಮ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು ದಿ. ಶಶಿಮಾಧವನ್ ಮಾನಂದವಾಡಿ ಹಾಗೂ ವಿಜಯ ಕುಮಾರಿ ಪುದುಪರಂಬಿಲ್ ದಂಪತಿಯ ಪುತ್ರ.

error: Content is protected !!
Scroll to Top