ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ➤ ಈಜು ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶುಭಹಾರೈಕೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.8.ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ (SFI) ಸಂಸ್ಥೆ ಆಶ್ರಯದಲ್ಲಿ ಜೂನ್  2019ರಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಈಜು ಸಂಕೀರ್ಣ, ಇದರ ವತಿಯಿಂದ ಈಜು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ರಾಜ್‍ಕೋಟ್, ಗುಜರಾತ್ ಇಲ್ಲಿ ನಡೆದ 46ನೇ ರಾಷ್ಟ್ರೀಯ ಜೂನಿಯರ್ ಹಾಗೂ 36ನೇ ಸಬ್ ಜೂನಿಯರ್ ಈಜು ಚಾಂಪಿಯನ್‍ಶಿಪ್-2019ನ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ 4 x 50 ಮೀಟರ್ ಫ್ರೀ ಸ್ಟ್ರೈಲ್ ರೀಲೆಯಲ್ಲಿ ಮಂಗಳೂರಿನ ಶ್ರೀ ವಫೀ ಅಬ್ದುಲ್ ಹಕೀಂ ಚಿನ್ನದ ಪದಕ ಹಾಗೂ ಆರ್ನಾ ಎ.ಪಿ. ಬೆಳ್ಳಿಯ ಪದಕವನ್ನು ಪಡೆದು ಮಂಗಳೂರಿಗೆ ಹೆಸರನ್ನು ತಂದಿರುತ್ತಾರೆ.

Also Read  ತಂಪಾದ ಖಾದ್ಯ ವೈವಿಧ್ಯ

ಈ ಕ್ರೀಡಾ ಪಟುಗಳು ಶ್ರೀ ಅಬ್ದುಲ್ ವಫೀಯವರು ಜೈ ಹಿಂದ್ ಕ್ಲಬ್‍ನ್ನು ಸದಸ್ಯರಾಗಿದ್ದು ಇವರು ಮುಖ್ಯ ತರಬೇತಿದಾರರಾದ ಶ್ರೀ ರಾಮಕೃಷ್ಣ ರವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಆರ್ನಾ ಎ.ಪಿ ಯವರು ಮಂಗಳಾ ಕ್ಲಬ್‍ನ ಸದಸ್ಯರಾಗಿದ್ದು, ಇವರು ಶ್ರೀ ಲೋಕರಾಜ್ ಮುಖ್ಯ ತರಬೇತಿದಾರರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಇವರ ಕ್ರೀಡಾ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುವ ಎಸೋಸಿಯೇಶನ್‍ನ ಅಧ್ಯಕ್ಷರು ಧರ್ಮೇಂದ್ರ, ಪ್ರ. ಕಾರ್ಯದರ್ಶಿ ಶ್ರೀ ರಾಮಚಂದ್ರ ಭಟ್, ಖಜಾಂಜಿ ಕಣ್ಣನ್ ಹಾಗೂ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು.

error: Content is protected !!
Scroll to Top