(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.8.ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರ, ಸುರತ್ಕಲ್ ಕಚೇರಿಯಲ್ಲಿ ಜುಲೈ 5 ರಂದು ಅಪರಾಹ್ನ 4 ಗಂಟೆಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್‍ಶಿಫ್ ತರಬೇತಿ ಕಾರ್ಯಕ್ರಮದ ಉದ್ಟಾಟನಾ ಸಮಾರಂಭ ಜರುಗಿತು.
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಮಂಗಳೂರು ಇದರ ಅಧ್ಯಕ್ಷ ಅರುಣ್ ಪ್ರಭ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದೆ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಈ ಅವಕಾಶಗಳು ಇರಲಿಲ್ಲ, ಈ ತರಬೇತಿಯಿಂದ ಬಹಳಷ್ಟು ವಿಷಯಗಳು ವಿದ್ಯಾರ್ಥಿಗಳಿಗೆ ತಿಳಿಯಲ್ಪಡುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಹೇಳಿದರು. ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಮಂಗಳೂರು ಇದಕ್ಕೆ ಪೂರ್ಣ ಸಹಕಾರ ನೀಡಲಿದೆ ಎಂದರು.
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಕಾರ್ಯದರ್ಶಿ ಅನಿಲ್ ಬಾಳಿಗಾ ಉಪಸ್ಥಿತರಿದ್ದರು. ದ.ಕ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ ಸ್ವಾಗತಿಸಿದರು. ಈ ತರಬೇತಿ ಸಮಾರಂಭಕ್ಕೆ ದ.ಕ. ಜಿಲ್ಲೆಯ 5 ಇಂಜಿನಿಯರಿಂಗ್ ಕಾಲೇಜಿನ ಸುಮಾರು 25 ಮಂದಿ ವಿದ್ಯಾರ್ಥಿಗಳು ಹಾಜರಿದ್ದರು. ಈ ತರಬೇತಿ 3 ವಾರಗಳವರೆಗೆ ನಡೆಯಲಿದ್ದು, ಪ್ರಾಯೋಗಿಕ ಮತ್ತು ಕ್ಷೇತ್ರ ಮಟ್ಟದ ತರಬೇತಿ ನೀಡಲಾಗುವುದು.