ಹಜ್ಜಾಜ್ ಯಾತ್ರಾರ್ಥಿಗಳಿಗೆ ಚುಚ್ಚುಮದ್ದು ಲಸಿಕೆಗೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ಸರಕಾರದ ಹಜ್ ಸಮಿತಿ ವತಿಯಿಂದ ಪವಿತ್ರ ಹಜ್‍ಗೆ ತೆರಳುವ ದಕ್ಷಿಣ ಕನ್ನಡ ಜಿಲ್ಲೆಯ 683 ಹಜ್ಜಾಜ್‍ ಯಾತ್ರಾರ್ಥಿಗಳಿಗೆ ಸರಕಾರದ ವತಿಯಿಂದ ನೀಡಲಾಗುವ ಚುಚ್ಚುಮದ್ದು ಹಾಗೂ ಲಸಿಕೆ ಕಾರ್ಯಕ್ರಮಕ್ಕೆ ಶನಿವಾರ ಮಂಗಳೂರು ಕೊಡಿಯಾಲ್ ಬೈಲ್ ಯೇನಪೋಯ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.


ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಯೇನಪೋಯ ಮಹಮ್ಮದ್ ಕುಂಞ ಅವರು ಅಧ್ಯಕ್ಷತೆ ವಹಿಸಿದರು. ಬಂದರು ಕೇಂದ್ರ ಜುಮಾ ಮಸೀದಿ ಖತೀಬರಾದ ಸದಕತುಲ್ಲಾ ಫೈಝಿ ದುಆ ಪ್ರಾರ್ಥನೆ ನೆರವೇರಿಸಿದರು. ಹಜ್‍ಗೆ ತೆರಳುವ ಸದಕತುಲ್ಲಾ ಫೈಝಿ ಅವರಿಗೆ ಆರಂಭಿಕ ಚುಚ್ಚುಮದ್ದು ಮತ್ತು ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧಿಕಾರಿ ಮೆಹಬೂಬ್ ಪಾಷಾ, ಯೇನಪೋಯ ಆಸ್ಪತ್ರೆ ಆಡಳಿತ ಕಾರ್ಯ ನಿರ್ವಾಹಕಧಿಕಾರಿ ಡಾ. ತಾಹೀರ್, ಹಜ್ ನಿರ್ವಹಣಾ ಸಮಿತಿಯ ಪ್ರದಾನ ಕಾರ್ಯದರ್ಶಿ ಮುಮ್ತಾಝ್ ಅಲಿ ಕೃಷ್ಣಾಪುರ, ನಾಸೀರ್ ಲಕ್ಕಿಸ್ಟಾರ್ ರಶೀದ್ ವಿಟ್ಲ, ಮತ್ತಿತರರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group