(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂನ್.27. ಕೇಂದ್ರ ಸರ್ಕಾರದಿಂದ ರೈತರಿಗೆ ವರ್ಷಕ್ಕೆ 6 ಸಾವಿರ ನೀಡುವ ಮಹತ್ವ ಪೂರ್ಣ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅನುಷ್ಠಾನ ಗೊಳಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಹೆಚ್ಚಿನ ಶ್ರಮ ತೋರಿಸಿದಂತಿದೆ.
ಲೋಕಸಭೆಗೆ ಮುಂಚೆ ಆಮೆಗತಿಯಲ್ಲಿದ್ದ ಈ ಯೋಜನೆ ಕೇವಲ 11 ರೈತರಿಗೆ ಮಾತ್ರ ಫಲಕಾರಿಯಾಗಿತ್ತು. ಇದನ್ನು ಮನಗಂಡ ಕೇಂದ್ರ ಸರ್ಕಾರ ಪಿ.ಎಂ ಕಿಸಾನ್ ಯೋಜನೆ ಸಂಪೂರ್ಣ ಮಾಡಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ನೂತನ ಕೇಂದ್ರ ಸರ್ಕಾರ ರಚನೆಯಾದ ನಂತರ ತಾಲೂಕಿನ 38.513 ಫಲಾನುಭವಿಗಳಲ್ಲಿ 19 ಸಾವಿರ ಅರ್ಜಿಗಳನ್ನು ಸ್ವೀಕರಿಸಲಾಗಿದೆ.7,500 ಅರ್ಜಿಗಳನ್ನು ನೋಂದಣಿ ಮಾಡಲಾಗಿದೆ.
ಕೃಷಿ ಭೂಮಿ ಹೊಂದಿರುವ ರೈತರಿಗೆ 6 ಸಾವಿರ ನೀಡುವ ಮಹತ್ವ ಪೂರ್ಣ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ನೀಡಲು ಜೂ.30 ಕೊನೆ ದಿನವಾಗಿದೆ. ರೈತರು ಅರ್ಜಿ ಜತೆ ದಾಖಲೆಗಳನ್ನು ನೀಡಬೇಕು ಪಿಎಂ ಕಿಸಾನ್ ಯೋಜನೆಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಜಮೀನಿನ ಪಹಣಿ ನಕಲು ಪ್ರತಿಯನ್ನು ರೈತರು ಗ್ರಾಪಂ, ಗ್ರಾಮ ಲೆಕ್ಕಾಧಿಕರಿ, ರಾಜ ಸ್ವನಿರೀಕ್ಷಕರ ಕಚೇರಿ, ತಹಸೀಲ್ದಾರ್ ಕಚೇರಿ, ತಾಪಂ, ರೈತ ಸಂಪರ್ಕ ಕೇಂದ್ರದಲ್ಲಿ ನೀಡುವಂತೆ ಸೂಚಿಸಲಾಗಿದೆ.