ಫೆಬ್ರವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಗುರುಪುರ ಸೇತು

(ನ್ಯೂಸ್ ಕಡಬ) newskadaba.com ಗುರುಪುರ, ಜೂನ್.24.ಶನಿವಾರ ಗುರುಪುರದಲ್ಲಿ ಸೇತುವೆ ಕಾಮಗಾರಿಯ ಪ್ರಗತಿ ವೀಕ್ಷಿಸಲು  ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್‌ ಕುಮಾರ್‌ ಕಟೀಲು ಆಗಮಿಸಿ ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಫಲ್ಗುಣಿ ನದಿಗೆ ಗುರುಪುರದಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಜಿಲ್ಲೆಯಲ್ಲೇ ಅತಿ ಶೀಘ್ರ ಮುಕ್ತಾಯಗೊಳ್ಳಲಿರುವ ಕಾಮಗಾರಿ ಇದೆಂಬ ಹೆಗ್ಗಳಿಕೆ ಪಾತ್ರವಾಗಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಸೇತುವೆ ಕಾಮಗಾರಿ 2019ರ ಫೆಬ್ರವರಿ 21ಕ್ಕೆ ಆರಂಭಗೊಂಡಿದ್ದು, 2021ರ ಫೆಬ್ರವರಿ 20ರಂದು ಪೂರ್ಣಗೊಳಿಸುವ ಕರಾರಿನ ಮೇರೆಗೆ ಕಾವೂರಿನ ಮೊಗರೋಡಿ ಕನ್‌ಸ್ಟ್ರಕ್ಷನ್‌ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. ಟೆಂಡರು ಪಡೆದ ತತ್‌ಕ್ಷಣ ಕಾಮಗಾರಿ ಆರಂಭಿಸಿರುವ ಕಂಪೆನಿ, ಬೇಸಗೆಯಲ್ಲಿ ಕ್ಷಿಪ್ರಗತಿಯಲ್ಲಿ ಪಿಲ್ಲರ್‌ ಹಾಕುವ ಕೆಲಸ ಮುಗಿಸಿದೆ. ಮಳೆಗಾಲದಲ್ಲಿ ಗರ್ಡರ್‌ ಮತ್ತು ಸ್ಲಾ ್ಯಬ್‌ ಅಳವಡಿಕೆ ನಡೆಯಲಿದೆ. ನಿಗದಿತ ಅವಧಿಯ ಒಳಗಡೆ ಲೋಕಾರ್ಪಣೆಗೊಳ್ಳಲಿದೆ ಎಂದರು. ಮಂಗಳೂರು ಬೈಪಾಸ್‌ ರಸ್ತೆಗೆ ಸರಕಾರ ಒಪ್ಪಿಗೆ ನೀಡಿದೆ.

Also Read  ಸುಳ್ಯ: ಭಾರೀ ಗಾಳಿ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನ ಮರ ಅಪಾಯದಿಂದ ಪಾರು

ಈ ರಸ್ತೆಮುಲ್ಕಿ – ಕಿನ್ನಿಗೋಳಿ-ಕಟೀಲು-ಬಜಪೆ – ಗುರುಪುರ ಕೈಕಂಬ -ಪೊಳಲಿ – ಬಿ.ಸಿ.ರೋಡ್‌- ಮೆಲ್ಕಾರು -ಮುಡಿಪು-ಕೊಣಾಜೆ ಮೂಲಕ ತಲಪಾಡಿ ಸಂಪರ್ಕಿಸಲಿದೆ. ‘ಭಾರತ್‌ ಮಾಲ’ ಯೋಜನೆಯಡಿ ಬೈಪಾಸ್‌ ನಿರ್ಮಾಣಗೊಳ್ಳಲಿದೆ. ಪ್ರಸ್ತುತ ಗುರುಪುರ ಸೇತುವೆ ಗುರುಪುರಕ್ಕೆ ಬೈಪಾಸ್‌ ರಸ್ತೆಯಾಗಲಿದ್ದು, ಮಂಗಳೂರು ಕುಲಶೇಖರ ರಾಷ್ಟ್ರೀಯ ಹೆದ್ದಾರಿ ಅಡ್ಡೂರು ಮುಖಾಂತರ ಸಂಪರ್ಕ ಕಲ್ಪಿಸಲಿದೆ. ಅಡ್ಡೂರಿನಲ್ಲಿ ಫ್ಲೈ ಓವರ್‌ ನಿರ್ಮಾಣಗೊಳ್ಳಲಿದ್ದು, ಪ್ರಮುಖ ಜಂಕ್ಷನ್‌ ಆಗಲಿದೆ ಎಂದರು. ಕೇಂದ್ರ ಸರಕಾರವು ಫೇಸ್‌ ಒಂದು, ಫೇಸ್‌ ಎರಡು ಹಾಗೂ ಫೇಸ್‌ ಮೂರು ಹೀಗೆ ಮೂರು ಹಂತಗಳಲ್ಲಿ ರಸ್ತೆಗಳ ಅಭಿವೃದ್ಧಿ ನಡೆಸುತ್ತಿದ್ದು, ಜಿಲ್ಲೆಯ ಹಲವು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. – ನಳಿನ್‌ ಕುಮಾರ್‌ ಕಟೀಲು

Also Read  ಸೈಬರ್ ಅಪರಾಧದ ನಿಯಂತ್ರಣಕ್ಕೆ ಶೀಘ್ರದಲ್ಲೇ ಡಿಜಿಪಿ ನೇಮಕ: ಜಿ.ಪರಮೇಶ್ವರ್

 

error: Content is protected !!
Scroll to Top