ಸಣ್ಣ ಮಳೆ ಬಂದರೂ ಕೃತಕ ನೆರೆ ಭೀತಿ

(ನ್ಯೂಸ್ ಕಡಬ) newskadaba.com ಸುಳ್ಯ, ಜೂನ್.24.ಮಳೆ ನೀರು ಹರಿದು ಹೋಗಲು ನಗರದ ಚರಂಡಿಗಳು ಸಿದ್ಧ್ದಗೊಳ್ಳದ ಕಾರಣ ಸಣ್ಣ ಮಳೆಗೂ ರಸ್ತೆ ತೋಡಿನಂತಾಗಿದೆ. ರವಿವಾರ ಮಧ್ಯಾಹ್ನ ಮುಕ್ಕಾಲು ತಾಸು ಸುರಿದ ಮಳೆಗೆ ರಸ್ತೆ ಮಳೆ ನೀರಿನಿಂದ ತುಂಬಿ ಹೋಗಿತ್ತು.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ನಗರದ ಮಧ್ಯದಲ್ಲೇ ಹಾದು ಹೋಗಿದೆ. ಇಲ್ಲಿ ಸಣ್ಣ ಮಳೆ ಬಂದರೂ ಕೃತಕ ನೆರೆ ಭೀತಿ ಉಂಟಾಗುತ್ತಿದೆ.ಮುಖ್ಯ ರಸ್ತೆ ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಗೆ ಸೇರಿದೆ. ರಸ್ತೆ ಹಾದು ಹೋಗಿರುವ ಪ್ರದೇಶ ನ.ಪಂ. ವ್ಯಾಪ್ತಿಯೊಳಗಿದೆ. ಹಾಗಾಗಿ ಚರಂಡಿ ದುರಸ್ತಿ ಮಾಡುವ ಜವಾಬ್ದಾರಿ ಯಾರಿಗೆ ಸೇರಿದೆ ಎನ್ನುವ ಗೊಂದಲ ಇದೆ. ನ.ಪಂ ಇದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಜವಾಬ್ದಾರಿ ಎನ್ನುವ ನಿಲುವು ಹೊಂದಿದ್ದರೆ, ನಿರ್ಮಾಣ ಮಾತ್ರ ನಮ್ಮ ಹೊಣೆ, ಕಾಲ-ಕಾಲಕ್ಕೆ ನಿರ್ವಹಣೆ ಆಯಾ ವ್ಯಾಪ್ತಿಯ ಸ್ಥಳೀಯಾಡಳಿತಕ್ಕೆ ಸೇರಿದೆ ಎನ್ನುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಾದ. ಏನೇ ಆದರೂ ಇಲ್ಲಿ ಸಮಸ್ಯೆ ಸಾರ್ವಜನಿಕರಿಗೆ ತಪ್ಪಿದ್ದಲ್ಲ.

Also Read  ಹಿಂದೂ ಜಾಗರಣ ವೇದಿಕೆ ಪಂಜ ವಲಯದ ಘಟಕ ಅಧ್ಯಕ್ಷರಾಗಿ ವಾಸುದೇವ ಕೆರೆಕ್ಕೋಡಿ ಆಯ್ಕೆ

 

error: Content is protected !!
Scroll to Top