(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.ಮಂಗಳೂರು ನಗರ ಪೊಲೀಸ್ ಘಟಕದ 2015-16, 2016-17, 2017-18 ನೇ ಸಾಲಿನ ವಾಹನದ ವಿಭಾಗದಲ್ಲಿರುವ ನಿರುಪಯುಕ್ತ ಹಳೇಯ ಟಯರ್ ಟ್ಯೂಬ್, ಮಡ್ಡಾಯಿಲ್ ಮತ್ತು ಇತರೆ ಬಿಡಿಭಾಗಗಳನ್ನು ನಗರದ ಸಶಸ್ತ್ರ ಮೀಸಲು ಪಡೆಯ ಮಂಗಳೂರು ನಗರ ಆವರಣದಲ್ಲಿ ಬಹಿರಂಗ ಹರಾಜು ನಡೆಯಲಿದೆ.
ಜೂನ್ 27 ರಂದು ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಆಯುಕ್ತರ ಕಚೇರಿ, ಮಂಗಳೂರು ನಗರ, ಮಂಗಳೂರು ಕಚೇರಿಯನ್ನು ಸಂಪರ್ಕಿಸಲು ಪೊಲೀಸ್ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ .