ದ. ಕ. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ➤ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.21.2019-20ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾ ಪಂಚಾಯತ್ ಅನುದಾನದ ಅಡಿಯಲ್ಲಿ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಎಪ್ರಿಲ್-2018 ರಿಂದ ಮಾರ್ಚ್-2019 ವರೆಗೆ ರಾಷ್ಟ್ರ ಮಟ್ಟದಲ್ಲಿ ಪದಕ ಪಡೆದವರಿಗೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಪ್ರತಿಭಾನ್ವಿತ ಪ್ರಾಥಮಿಕ/ಪ್ರೌಢಶಾಲಾ/ಪದವಿ ಪೂರ್ವ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು,  ಕ್ರೀಡಾಪಟುಗಳು ಅರ್ಜಿ ನಮೂನೆಯನ್ನು ಈ ಕಚೇರಿಯಿಂದ ಪಡೆದು ಜುಲೈ 31ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರದೀಪ್ ಡಿ’ಸೋಜ, ಉಪನಿರ್ದೇಶಕರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ.ಜಿಲ್ಲೆ, ಮಂಗಳೂರು (ದೂ.0824-2451264) ಇವರನ್ನು ಸಂಪರ್ಕಿಸಬಹುದಾಗಿದೆ.

Also Read  ಸುರತ್ಕಲ್: ಮಹಿಳೆಯ ದ್ವನಿ ಅನುಕರಣೆ ಮಾಡಿ ಬ್ಲ್ಯಾಕ್ ಮೇಲ್ !    ➤  ಆರೋಪಿ ಅರೆಸ್ಟ್

error: Content is protected !!
Scroll to Top