ಉತ್ತಮ ಜೀವನಕ್ಕೆ ಆರೋಗ್ಯವು ಬಹುಮುಖ್ಯ ➤ ಮೃತ್ಯುಂಜಯ ಸ್ವಾಮಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.20.ಒಬ್ಬ ವ್ಯಕ್ತಿಯ ಪ್ರಗತಿಗೆ ಆರೋಗ್ಯಕರ ವಾತಾವರಣವು ಬಹಳಷ್ಟು ಮುಖ್ಯ. ಆರೋಗ್ಯ ಶಿಬಿರಗಳಿಂದ ರೋಗರುಜಿನಗಳ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಉಪಯೋಗವನ್ನು ಪಡೆದುಕೊಳ್ಳಿ ಎಂದು ಉಪ ಕಮಾಂಡೆಂಡ್ ಸಿ.ಐ.ಎಸ್.ಎಫ್. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಮೃತ್ಯುಂಜಯ ಸ್ವಾಮಿ ಡಿ. ಹೇಳಿದರು.

ಇಂದು ಸಿ.ಐ.ಎಸ್.ಎಫ್ ಗ್ರಾಮ ಎಂ.ಆರ್.ಪಿ.ಎಲ್. ಕುತ್ತೆತ್ತೂರು, ಕಾಟಿಪಳ್ಳ, ಮಂಗಳೂರಿನಲ್ಲಿ ರಾಜ್ಯ ಸರ್ಕಾರ, ಕೇಂದ್ರ ಗೃಹ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಒಂದು ದಿನದ ಆರೋಗ್ಯ ಶಿಬಿರ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾತಾವರಣವನ್ನು ಮಾಲಿನ್ಯ ಮಾಡುವುದರಲ್ಲಿ ಕೈಗಾರಿಕೆಗಳ ಪಾತ್ರ ಹೆಚ್ಚು. ಹಾಗಾಗಿ ಇಂತಹ ಪರಿಸರದಲ್ಲಿರುವ ನಾವು ತುಂಬಾ ಜಾಗರೂಕತೆಯಿಂದ ಇರಬೇಕು. ನುರಿತ ತಜ್ಞರು ಶಿಬಿರದಲ್ಲಿ ಉಪಸ್ಥಿತರಿರುವುದರಿಂದ ಎಲ್ಲ ಸಿ.ಐ.ಎಸ್.ಎಫ್ ಸಿಬ್ಬಂದಿಗಳು ಈ ಶಿಬಿರದ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

Also Read  ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ

ಮುಖ್ಯ ಅಥಿತಿಗಳಾಗಿ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣರಾವ್ ಮಾತನಾಡಿ, ವೈವಿಧ್ಯಮಯ ಜೀವನ ಶೈಲಿಯಿಂದ ಇಂದಿನ ಯುವ ಸಮುದಾಯ ಫಾಸ್ಟ್ ಫುಡ್ ತಿಂಡಿ ತಿನಸುಗಳನ್ನು ಸೇವಿಸಿ ವಿವಿಧ ರೀತಿಯ ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಜಾಗೃತಿ ಇಲ್ಲದಿರುವುದು ವಿವಿಧ ರೀತಿಯ ರೋಗರುಜಿನಗಳು ಮಾನವರ ಶರೀರದಲ್ಲಿ ಮಾರಣಾಂತಿಕ ಕಾಯಿಲೆಗಳನ್ನು ಉತ್ಪತ್ತಿ ಮಾಡುವುದಕ್ಕೆ ಮುಖ್ಯ ಕಾರಣ ಎನ್ನಬಹುದು ಎಂದರು.ಯಾವುದೇ ಕಾಯಿಲೆ ಬಂದರೂ ಪ್ರತಿಯೊಬ್ಬರೂ ನಿರ್ಲಕ್ಷ್ಯ ಮಾಡದೆ ಪ್ರಾರಂಭಿಕ ಹಂತದಲ್ಲಿ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಬೇಕು. ಇಲ್ಲವಾದಲ್ಲಿ ಸಮಯ ಮೀರಿ ಹೋದರೆ ವೈದ್ಯರು ಕೂಡಾ ಅಸಹಾಯಕರಾಗುತ್ತಾರೆ. ಕೈಗಾರಿಕಾ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಅತೀ ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ.

ಹಾಗಾಗಿ ಆರೋಗ್ಯದ ಕಡೆ ಹೆಚ್ಚು ಹೆಚ್ಚು ಕಾಳಜಿ ವಹಿಸಿ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಆರೋಗ್ಯ ಶಿಬಿರಗಳು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ನಮ್ಮ ಇಲಾಖೆಯ ಸಭಾಗಿತ್ವದಲ್ಲಿ ಮಾಡಲು ರೂಪರೇಷಗಳನ್ನು ಹಾಕಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ, ಅಂಧತ್ವ ನಿಯಂತ್ರಣ, ಹಾಗೂ ಮಾನಸಿಕ ಆರೋಗ್ಯ ವಿಭಾಗಾಧಿಕಾರಿ, ಡಾ. ರತ್ನಾಕರ, ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸೌಮ್ಯ, ಮನಶಾಸ್ತ್ರಜ್ಞರು, ಡಾ. ಅನಿರುದ್ಧ ಶೆಟ್ಟಿ, ಚರ್ಮರೋಗ ತಜ್ಞರು, ಡಾ. ನವೀನ್ ಕುಮಾರ, ಸಹಾಯಕ ಪ್ರಾದ್ಯಾಪಕರು ಕಮ್ಯೂನಿಟಿ ಮೇಡಿಸನ್, ಫಾದರ್ ಮುಲ್ಲರ ಮೇಡಿಕಲ್ ಕಾಲೇಜು, ಮಂಗಳೂರು ಡಾ. ಸೌರಭ್ ಉಪಸ್ಥಿತರಿದ್ದರು ಹಾಗೂ ಲೇಡಿ ಹೆಡ್ ಕಾನ್ಟೇಬಲ್ ವಿಠಲಮ್ಮ ಸ್ವಾಗತ ಮಾಡಿದರು ಮತ್ತು ಎಚ್.ಕೆ. ಸಿಂಗ್ ನಿರೂಪಿಸಿದರು.

Also Read  ನಾಳೆ(ಸೆ.30ರಂದು) ನೂಜಿಬಾಳ್ತಿಲದಲ್ಲಿ ಪುತ್ತೂರು ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರ ಪೀಠಾರೋಹಣ ► ಅಭಿನಂದನಾ ಸಮಾರಂಭ

error: Content is protected !!
Scroll to Top