(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.19.ಮತ್ಸ್ಯನಗರದ ಕೃಷಿ ವಿಜ್ಞಾನ ಕೇಂದ್ರವು ಭಾರತೀಯ ಕೃಷಿ ಸಂಶೋಧನಾ ಪರಿಷತ್‍ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ರೈತರಿಗೆ ಮತ್ತು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸುಧಾರಿತ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಕೃಷಿಗೆ ಪೂರಕ ತಾಂತ್ರಿಕತೆಗಳ ಕುರಿತು ಅರಿವು ಮೂಡಿಸುವ ವಿಸ್ತರಣಾ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ.ಕೃಷಿ ವಿಜ್ಞಾನ ಕೇಂದ್ರವು, ಇತ್ತೀಚೆಗೆ ಗೋರಿಗುಡ್ಡದ ಕಿಟೆಲ್ ಮೆಮೋರಿಯಲ್‍ನ ಅಂಗಸಂಸ್ಥೆಗಳ ಶಾಲಾ-ಕಾಲೇಜಿನಲ್ಲಿ ‘ವಿಶ್ವ ತಂಬಾಕು ನಿಗ್ರಹ ದಿನ’ವನ್ನು ಆಚರಿಸಿತು.
ಈ ವಿಶೇಷ ದಿನದ ಸಂದರ್ಭದಲ್ಲಿ ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಭಾರತ ಸರ್ಕಾರದಿಂದ ನಿರ್ದೇಶಿಸಲ್ಪಟ್ಟ ಪ್ರತಿಜ್ಞೆಯನ್ನು ಕೇಂದ್ರದ ಪ್ರಧಾನ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ರವರು ವಾಚಿಸಿದರು.ಕೇಂದ್ರದ ವಿಜ್ಞಾನಿಗಳು, ತಾಂತ್ರಿಕ ಮತ್ತು ಭೋದಕೇತರ ಸಿಬ್ಬಂದಿಗಳು, ಕಿಟೆಲ್ ಮೆಮೋರಿಯಲ್ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ತಂಬಾಕು ಮುಕ್ತ ವಲಯವನ್ನಾಗಿ ಕಾಪಾಡುತ್ತೇವೆಂದು ಪ್ರತಿಜ್ಞೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಟಿ. ರಾಮಚಂದ್ರ ನಾಯ್ಕ ಈ ರೀತಿ ಪ್ರತಿಜ್ಞಾ ನಿಧಿಯನ್ನು ಭೋದಿಸಿದರು. “ವಿಶ್ವ ತಂಬಾಕು ನಿಗ್ರಹ ದಿನವಾದಂತಹ ಇಂದು ನಾನು ಧೂಮಪಾನ ಹಾಗೂ ಯಾವುದೇ ರೀತಿಯ ತಂಬಾಕು ಉತ್ಪನ್ನಗಳನ್ನು ಬಳಸುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತಿದ್ದೇನೆ. ನನ್ನ ಕುಟುಂಬ ಅಥವಾ ಪರಿಚಯಸ್ಥರನ್ನು ತಂಬಾಕು ಉತ್ಪನ್ನಗಳನ್ನು ಬಳಸದೇ ಪ್ರೇರೇಪಿಸುವೆ ಎಂದು ನಾನು ಪ್ರತಿಜ್ಞೆ ತೆಗೆದುಕೊಳ್ಳುತ್ತೇನೆ. ನಾನು ನನ್ನ ಕಛೇರಿಯ ಮತ್ತು ಶಾಲೆಯ ಆವರಣವನ್ನು ತಂಬಾಕು ಮುಕ್ತ ವಲಯವೆಂದು ಕಾಪಾಡಿಕೊಳ್ಳುತ್ತೇನೆ ಮತ್ತು ನನ್ನ ಸಹಪಾಠಿ ಹಾಗೂ ಸಹೋದ್ಯೋಗಿಗಳಿಗೆ ಅದೇ ರೀತಿ ಪ್ರೇರಣೆ ನೀಡುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ”ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ತಂಬಾಕು ಮುಕ್ತ ದಿನದ ಪ್ರಾಮುಖ್ಯತೆ ತಿಳಿಸುತ್ತಾ, ವಿಶ್ವ ಆರೋಗ್ಯ ಸಂಸ್ಥೆಯಿಂದ ಗುರುತಿಸಲ್ಪಟ್ಟ ಎಂಟು ಅದಿಕೃತ ಜಾಗತೀಕ ಸಾರ್ವಜನಿಕ ಆರೋಗ್ಯ ಪ್ರಕಾರಗಳಲ್ಲೊಂದಾದ ತಂಬಾಕು ಮುಕ್ತ ದಿನವನ್ನು ಪ್ರತೀ ವರ್ಷ ಮೇ 31 ರಂದು ಆಚರಿಸಲಾಗುವುದೆಂದು ಈ ಸಂದರ್ಭದಲ್ಲಿ ತಿಳಿಸಿದರು.
ತಂಬಾಕು ಸೇವನೆಯಿಂದ ವ್ಯಾಪಕ ಹರಡಿಕೆಯನ್ನು ಮತ್ತು ಋಣಾತ್ಮಕ ಆರೋಗ್ಯದ ಪರಿಣಾಮಗಳನ್ನು ಗಮನ ಸೆಳೆಯಲು ಈ ದಿನವನ್ನು ಆಚರಿಸಲಾಗುವುದು.ತಂಬಾಕು ಸೇವನೆಯಿಂದ ಪ್ರತೀ ವರ್ಷ 7 ದಶಲಕ್ಷಕ್ಕೂ ಹೆಚ್ಚಿನ ಜನರ ಸಾವುಗಳಿಗೆ ಕಾರಣವಾಗಿದೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತೆಯ ಪ್ರಕಾರ, ಪತೀ ವರ್ಷ ಜಗತ್ತಿನಾದ್ಯಂತ 8 ಲಕ್ಷಕ್ಕೂ ಹೆಚ್ಚು ಪರೋಕ್ಷ ಧೂಮಪಾನಿಗಳು ಸಾವನ್ನಪ್ಪುತ್ತಿದ್ದಾರೆ. ಕಳೆದ 21 ವರ್ಷಗಳಲ್ಲಿ, ತಂಬಾಕು ಮುಕ್ತ ದಿನವನ್ನು ಸರ್ಕಾರಗಳು, ಸಾರ್ವಜನಿಕ ಆರೋಗ್ಯ ಸಂಘಟನೆಗಳು, ಧೂಮಪಾನಿಗಳು ಮತ್ತು ತಂಬಾಕು ಉದ್ಯಮದಿಂದ ಜಗತ್ತಿನಾದ್ಯಂತ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆಂದು ಈ ಸಂದರ್ಭದಲ್ಲಿ ತಿಳಿಸಿದರು.ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹಾಗೂ ಕೃಷಿಯೇತರ ವಿಷಯಗಳ ವಿಜ್ಞಾನಿಗಳಾದ ಹರೀಷ್ ಶಣೈ, ಡಾ. ಚೇತನ್ ಎನ್., ಡಾ. ಕೇದರನಾಥ್, ಡಾ. ನವೀನ್ ಕುಮಾರ ಬಿ.ಟಿ., ಡಾ. ಮಾಲ್ಲಿಕಾರ್ಜುನ, ಡಾ. ರಶ್ಮಿ ಆರ್. ಮತ್ತು ಕ್ಷೇತ್ರ ನಿರ್ವಾಹಕ ಡಾ. ಪುನೀತ್ ರಾಜ್ ಎಂ.ಎಸ್. ರವರು ಉಪಸ್ಥಿತರಿದ್ದರು.