ಕೃಷಿ ಪ್ರಶಸ್ತಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.15.2019-20 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆಯಲ್ಲಿ ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತ ಅರ್ಹ ರೈತರಿಂದ ಅರ್ಜಿ ಅಹ್ವಾನಿಸಲಾಗಿದೆ.


ಬೆಳೆ ಸ್ಪರ್ಧೆಗೆ ಭಾಗವಹಿಸುವ ಸಾಮಾನ್ಯ ರೈತರುಗಳು ರೂ 100/ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ರೈತರುಗಳು ರೂ 25/ ಪ್ರವೇಶ ಶುಲ್ಕವನ್ನು ಸಂದಾಯ ಮಾಡಬೇಕು.
ಬಹುಮಾನ ಮೊತ್ತದ ವಿವರ ಇಂತಿವೆ: ತಾಲೂಕು ಮಟ್ಟದಲ್ಲಿ ಪ್ರಥಮ 15000 ದ್ವಿತೀಯ 10000/ ತ್ಥತೀಯ 5000/ ಜಿಲ್ಲಾಮಟ್ಟದಲ್ಲಿ ಪ್ರಥಮ 30000 ದ್ವಿತೀಯ 25000/ ತ್ಥತೀಯ 50000/ ರಾಜ್ಯ ಮಟ್ಟದಲ್ಲಿ ಪ್ರಥಮ 40000 ದ್ವಿತೀಯ 10000/ ತೃತೀಯ 35000/ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸುವ ರೈತರು ಕನಿಷ್ಟ ಒಂದು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆದಿದ್ದು, ಕಂದಾಯ ಇಲಾಖೆ ಪ್ರಕಾರ ಜಮೀನು ಹೊಂದಿರಬೇಕು ಅಥವಾ ಸ್ವಂತ ಜಮೀನು ಹೊಂದಿರದಿದ್ದರೂ ಸಹ ಬೇಸಾಯದಲ್ಲಿ ತೊಡಗಿರುವ ಕೃಷಿಕರು ಜಮೀನು ಮಾಲಿಕರಿಂದ ಸಾಮಾನ್ಯ ವ್ಯವಹಾರಿಕ ಅದಿsಕಾರ(ಜಿಪಿಎ) ಹೊಂದಿರಬೇಕು.

Also Read  ಗೂನಡ್ಕ: ದಿವಂಗತ ಜಿ.ಜಿ.ನೀಲಮ್ಮ ಅವರಿಗೆ ಸಾರ್ವಜನಿಕ ಸಂತಾಪ ಸೂಚಕ ಸಭೆ

ನಿಗದಿಪಡಿಸಿರುವ ಸ್ಪರ್ಧಾತ್ಮಕ ಇಳುವರಿಯು ಹೆಕ್ಟೇರಿಗೆ 50 ಕ್ವಿಂಟಾಲ್ ಇದ್ದು, ಇದಕ್ಕಿಂತ ಹೆಚ್ಚು ಇಳುವರಿ ಬಂದಲ್ಲಿ ಮಾತ್ರ ಬಹುಮಾನಕ್ಕೆ ಪರಿಗಣಿಸಲಾಗುವುದು. ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅರ್ಜಿಯನ್ನು, ಆಗಸ್ಟ್ 31, ರೊಳಗಾಗಿ, ನಿಗದಿತ ಶುಲ್ಕದೊಂದಿಗೆ ಸಲ್ಲಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top