ಚಾಲಕನ ನಿಯಂತ್ರಣತಪ್ಪಿ ಕಾರು ಪಲ್ಟಿ➤ತನಿಕೆ ವೇಳೆ ಅಕ್ರಮ ಗೋ ಸಾಗಾಟ ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂನ್.7.ಮುಂಡಾಜೆ ಪರಿಸರದಲ್ಲಿ ಶುಕ್ರವಾರ ಬೆಳಗ್ಗೆ ಐಷಾರಾಮಿ ಕಾರೊಂದು ಪಲ್ಟಿ ಆಗಿತ್ತು.ತನಿಕೆ ವೇಳೆ ಅದು ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಕಾರು ಎಂದು ಪತ್ತಯಾಗಿದೆ.ಕಾರಿನಲ್ಲಿದ್ದ ದನಗಳು ಸಾವನ್ನಪ್ಪಿದ್ದು,ಆರೋಪಿಗಳು ಕಾರನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಕಾರಿನಲ್ಲಿ ಒಟ್ಟು ಆರು ದನಗಳನ್ನು ಕೂಡಿ ಹಾಕಲಾಗಿತ್ತು. ಚಾರ್ಮಾಡಿ ಕಡೆಯಿಂದ ಉಜಿರೆ ಕಡೆಗೆ ಕಾರು ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಕಮರಿಗೆ ಬಿದ್ದಿದೆ ಎನ್ನಲಾಗಿದೆ. ಈ ಕಾರು ಬೆಂಗಳೂರು ನೋಂದಣಿ ಸಂಖ್ಯೆ ಹೊಂದಿದೆ. ಚಾರ್ಮಾಡಿಯ ಚೆಕ್ ಪೋಸ್ಟ್ ಬಳಿ ಸರಿಯಾದ ಪರಿಶೀಲನೆ ನಡೆಸದೇ ಇರುವುದರಿಂದ ಇಂತಹ ಅಕ್ರಮಗಳು ಸರಾಗವಾಗಿ ನಡೆಯುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

Also Read  ಅರ್ಹರಲ್ಲದವರ ಕಾರ್ಡ್ ಮಾತ್ರ ರದ್ದು: ಸಿ.ಎಂ.ಸಿದ್ದರಾಮಯ್ಯ

error: Content is protected !!
Scroll to Top