ಯುವತಿ ಕಾಣೆಯಾಗಿದ್ದಾರೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.4.ತೋಕೂರು ಕಂಬಳಬೆಟ್ಟು, ಹಳೆಯಂಗಡಿ ಪೋಸ್ಟ್ ನಲ್ಲಿ ವಾಸವಿದ್ದ ಅವಿವಾಹಿತೆ ಕುಮಾರಿ ಉಮಾವತಿ ಎಂಬಾಕೆ ಹಲ್ಲಿನ ಡಾಕ್ಟರ್ ಹತ್ತಿರ ಹೋಗುತ್ತೇನೆ ಎಂದು ಹೋದಾಕೆ ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


ಕಾಣೆಯಾದವರ ಚಹರೆ ಇಂತಿವೆ: ಹೆಸರು – ಉಮಾವತಿ, ಪ್ರಾಯ-34 ವರ್ಷ, ಎತ್ತರ-5.4 ಅಡಿ, ಕೋಲು ಮುಖ, ಧರಿಸಿದ ಬಟ್ಟೆ-ನೀಲಿ ಕಪ್ಪು ಹಳದಿ ಚೌಕುಳಿಯ ಚೂಡಿದಾರ್ ಟಾಪ್ ಮತ್ತು ನೀಲಿ ಬಣ್ಣದ ಲೆಗ್ಗಿನ್ಸ್ ಪ್ಯಾಂಟ್, ಗೊತ್ತಿರುವ ಭಾಷೆ-ಕನ್ನಡ, ತುಳು, ಕಿವಿಯಲ್ಲಿ ಬೆಂಡೋಲೆ ಮತ್ತು ಕುತ್ತಿಗೆಯಲ್ಲಿ ರೋಲ್ಡ್ ಗೋಲ್ಡ್ ಸರ ಧರಿಸಿರುತ್ತಾರೆ.ಇವರ ಬಗ್ಗೆ ಮಾಹಿತಿ ದೊರಕಿದಲ್ಲಿ ಮುಲ್ಕಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 0824-2290533, 9480805359, 9480805332 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಪುತ್ತೂರು: ಕಾಡುಹಂದಿ ದಾಳಿ ದ್ವಿಚಕ್ರ ವಾಹನ ಸವಾರನಿಗೆ ಗಾಯ

error: Content is protected !!
Scroll to Top