ಒಂದು ವರ್ಷದ ರಂಗಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.3.ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ರಂಗಾಯಣವು ಭಾರತೀಯ ರಂಗಶಿಕ್ಷಣ ಕೇಂದ್ರ “ರಂಗ ಶಾಲೆ” ಯನ್ನು ಕಳೆದ ಒಂಬತ್ತು ವರ್ಷಗಳಿಂದ ನಡೆಸುತ್ತಿದ್ದು, ಈ ಕೋರ್ಸಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆಯನ್ನು ನೀಡಿದೆ. ಇದು ಹತ್ತನೇ ವರ್ಷ.

ಈ ಒಂದು ವರ್ಷದ ರಂಗಶಿಕ್ಷಣದಲ್ಲಿ ಡಿಪ್ಲೋಮಾ’ ಕೋರ್ಸಿನ 2019-20ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳ ಕನಿಷ್ಠ ವಿದ್ಯಾರ್ಹತೆ ದ್ವಿತೀಯ ಪಿ.ಯು.ಸಿ.(10+2) ಆಗಿರಬೇಕು. 18 ತುಂಬಿದ 28 ವರ್ಷದೊಳಗಿನವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಮಾಹೆಯಾನ ರೂ.3,000/-ವಿದ್ಯಾರ್ಥಿವೇತನ ಹಾಗೂ ಊಟೋಪಚಾರಕ್ಕಾಗಿ ಭತ್ಯೆಯಾಗಿ ಮಾಹೆಯಾನ ರೂ.2,000/-ಗಳನ್ನು ನೀಡಲಾಗುವುದು.

ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳು ದಿನಾಂಕ:16-05-2019 ರಿಂದ ರಂಗಾಯಣದ ವೆಬ್‍ಸೈಟ್ www.rangayana.org ನಲ್ಲಿ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅರ್ಜಿ ಶುಲ್ಕ (ಸಾಮಾನ್ಯ ವರ್ಗ ರೂ.100/-, ಪ.ಜಾ, ಪ.ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.50/-ಗಳು) ಡಿ.ಡಿ.ಯನ್ನು ಜಂಟಿ ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು-570005 ಇವರ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ (ದಿನಾಂಕ:10-06-2019ರೊಳಗೆ ತಲುಪುವಂತೆ) ಸಲ್ಲಿಸಬಹುದು.

Also Read  ಬಟ್ವಾಳ: ನಾಪತ್ತೆಯಾಗಿರುವ ಯುವತಿ ಠಾಣೆಗೆ ಹಾಜರು  ➤ ಮನೆಗೆ ಹೋಗಲು ನಿರಾಕರಣೆ

ಅಥವಾ ರಂಗಾಯಣದ ಕಚೇರಿಯ ಅವಧಿಯಲ್ಲಿ (ಕೆಲಸದ ದಿನಗಳು) ಖುದ್ದಾಗಿ ಬಂದು ಜೂನ್ 10 ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬಹುದು. ಸಂದರ್ಶನವನ್ನು ಜೂನ್ 22 ಹಾಗೂ 23 ರಂದು ರಂಗಾಯಣದ ಆವರಣದಲ್ಲಿ ನಡೆಸಲಾಗುವುದು. ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನದ ದಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಲಘು ಉಪಹಾರದ ವ್ಯವಸ್ಥೆಯನ್ನು ರಂಗಾಯಣದಿಂದಲೇ ಮಾಡಲಾಗುವುದು.

ಆಯ್ಕೆಯಾದ ವಿದ್ಯಾರ್ಥಿಗಳು ಜುಲೈ 1 ರೊಳಗೆ ಮೂಲ ದಾಖಲಾತಿಗಳನ್ನು ಸಲ್ಲಿಸಿ ಶಾಲೆಗೆ ಪ್ರವೇಶವನ್ನು ಪಡೆದುಕೊಳ್ಳಬೇಕು.ಜುಲೈ 15 ರಿಂದ ತರಗತಿಗಳು ಆರಂಭವಾಗುತ್ತವೆ. ಹೆಚ್ಚಿನ ವಿವರಕ್ಕಾಗಿ ದೂರವಾಣಿ ಸಂಖ್ಯೆ: 0821-2512639, 9964599929 ಮತ್ತು 8971930958 ನ್ನು ಸಂಪರ್ಕಿಸುವುದು. ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Also Read  ನಮ್ಮ ನಾಡು ಶ್ರೀಗಂಧದ ನಾಡಾಗಲಿ- ನಿವೃತ್ತ ಐ.ಎ.ಎಸ್ ಅಧಿಕಾರಿ ಶ್ರೀ ಕೆ. ಅಮರನಾರಾಯಣ

error: Content is protected !!
Scroll to Top