(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.30.ಕರ್ನಾಟಕ ರಾಜ್ಯ ಎಡಿಬಿ ನೆರವಿನೊಂದಿಗೆ ಮಂಗಳೂರು ನಗರಕ್ಕೆ ಕ್ವಿಮಿಪ್ ಟ್ರಾಂಚ್-2 ರಡಿಯಲ್ಲಿ ಒಳಚರಂಡಿ ಹಾಗೂ ನಿರಂತರ ನೀರಿ ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಈ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಸಭೆಯನ್ನು ಅಯೋಜಿಸಲಾಗಿದೆ.
ಆ ಪ್ರಯುಕ್ತ ಮೇ 31 ರಂದು ಸಂಜೆ 6.30 ಗಂಟೆಗೆ ವಾರ್ಡ್ ನಂ. 51 ರಲ್ಲಿ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಪಡೀಲ್ ನ ನಿಡ್ಡಲ್ ಗೋಕರ್ಣ ಆಗ್ನೇಸ್ ರೇಗೋ ಮನೆ ಹತ್ತಿರ ಹಾಗೂ ಜೂನ್ 1 ರಂದು ಸಂಜೆ 5 ಗಂಟೆಗೆ ವಾರ್ಡ್ ನಂ 54 ರಲ್ಲಿ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಜಪ್ಪಿನ ಮೊಗರು ನಲ್ಲಿ ಕೆಯುಐಎಫ್‍ಸಿ ಹಾಗೂ ಮಂಗಳೂರು ಮಹಾನಗರಪಾಲಿಕೆ ಸಹಯೋಗದಿಂದ ಆಯೋಜಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.