ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರಾತಿಗಾಗಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.25.ಮಂಗಳೂರು ಮೇ 24 ಕರ್ನಾಟಕ ವಾರ್ತೆ:- 2018-19ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ, ಅಂತಿಮ ಪದವಿ, ಅಂತಿಮ ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಜೂರಾತಿಗಾಗಿ ಅಂತರ್ಜಾಲದ ಮೂಲಕ ಅರ್ಜಿಗಳನ್ನು ಇಲಾಖಾ ವೆಬ್‍ಸೈಟ್ www.sw.kar.nic.in ನಲ್ಲಿ ಸಲ್ಲಿಸಲು ತಿಳಿಸಿದೆ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಂಡಕ್ಕೆ ಸೇರಿದವರಾಗಿರಬೇಕು ಕರ್ನಾಟಕ ರಾಜ್ಯದವರಾಗಿರಬೇಕು. ಅಂತರ್ಜಾಲದಲ್ಲಿ ಸಲ್ಲಿಸಿರುವಅರ್ಜಿಯನ್ನುಪ್ರಾಂಶುಪಾಲರಿಂದ ದೃಡೀಕರಿಸಬೇಕು (2018-19 ನೇ ಸಾಲಿನಲ್ಲಿ ಪಾಸದವರಿಗೆ ಮಾತ್ರ) ಆಯಾಯ ತಾಲೂಕಿನ ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ದೃಡೀಕೃತ ಪ್ರತಿ ಖಆ ಸಂಖ್ಯೆಯನ್ನು ಹೊಂದಿರಬೇಕು.ಪ್ರಥಮ ಶ್ರೇಣಿಯಲ್ಲಿಯೇ ಪಡೆದಿರುವ ಮೂಲ ಅಂಕ ಪಟ್ಟಿಯ ದೃಡೀಕೃತ ಪ್ರತಿ ಮತ್ತು ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ ವಿದ್ಯಾರ್ಥಿಯು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ತೆರೆದಿರುವ ಪಾಸ್ ಪುಸ್ತಕದ ನಕಲು ಪ್ರತಿಯನ್ನು ಸಲ್ಲಿಸಬೇಕು.

Also Read  ಕಲ್ಲಡ್ಕ ಗಲಭೆಯ ದೃಶ್ಯ ನೋಡಬೇಕೇ...?

ಎಲ್ಲಾ ದಾಖಲೆಗಳನ್ನು ಆನ್‍ಲೈನ್ ಅರ್ಜಿಯೊಂದಿಗೆ ಪ್ರಾಂಶುಪಾಲರಿಂದ ದೃಡೀಕರಿಸಿ ಬಂಟ್ವಾಳ ತಾಲೂಕ ಬಿ.ಸಿ. ರಸ್ತೆ ಸಹಾಯಕ ನಿದೇಶಕರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಗಣೇಶ ಬಿಲ್ಡಿಂಗ್, 2ನೇ ಮಹಡಿ ಇಲ್ಲಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿದೇಶಕರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಬಂಟ್ವಾಳ. ದೂರವಾಣಿ ಸಂಖ್ಯೆ 08255-230968, ವೆಬ್‍ಸೈಟ್ www.sw.kar.nic.in  ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಕಡಬ: ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ- ರಕ್ಷಕ ಸಭೆ

 

error: Content is protected !!
Scroll to Top