ವಿದ್ಯಾರ್ಥಿ ನಿಲಯ/ ಆಶ್ರಮ ಶಾಲೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.20.2019-20 ನೇ ಸಾಲಿನಲ್ಲಿ ಬಂಟ್ವಾಳ ತಾಲೂಕು ಬಿ.ಸಿ ರಸ್ತೆ, ಸಹಾಯಕ ನಿರ್ದೇಶಕರವರ ಕಚೇರಿ(ಗ್ರೇಡ್ -2), ಸಮಾಜ ಕಲ್ಯಾಣ ಇಲಾಖಾ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಹೊಸದಾಗಿ ಪ್ರವೇಶ ಪಡೆಯಲು 5 ನೇ ತರಗತಿಯಿಂದ 10 ನೇ ತರಗತಿಯವರೆಗಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು www.sw.kar.nic.in  ವೆಬ್‍ಸೈಟ್ ಮೂಲಕ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು www.tw.kar.nic.in  ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯ/ ಆಶ್ರಮ ಶಾಲೆಗಳ ವಿವರ ಇಂತಿವೆ:- ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಪಾಣೆಮಂಗಳೂರು ಬಂಟ್ವಾಳ ತಾಲೂಕು (5 ರಿಂದ 10 ನೇ ತರಗತಿ), ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿ ನಿಲಯ ಮೊಡಂಕಾಪು ಬಂಟ್ವಾಳ ತಾಲೂಕು(5 ರಿಂದ 10 ನೇ ತರಗತಿ), ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಕನ್ಯಾನ ಬಂಟ್ವಾಳ ತಾಲೂಕು(5 ರಿಂದ 10 ನೇ ತರಗತಿ), ಪರಿಶಿಷ್ಟ ಜಾತಿ ವಸತಿ ಶಾಲೆ ಜೋಡುಮಾರ್ಗ ಬಂಟ್ವಾಳ ತಾಲೂಕು(1 ರಿಂದ 5 ನೇ ತರಗತಿ).

Also Read  ಗುವಾಹಟಿ: ಸಿಲಿಂಡರ್ ಸ್ಫೋಟ ನೂರಾರು ಮನೆಗಳಿಗೆ ಹಾನಿ

ಪರಿಶಿಷ್ಟ ಪಂಗಡದ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯ/ ಆಶ್ರಮ ಶಾಲೆಗಳ ವಿವರ ಇಂತಿವೆ:- ಪರಿಶಿಷ್ಟ ಪಂಗಡ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ವಿಟ್ಲ ಬಂಟ್ವಾಳ ತಾಲೂಕು(5 ರಿಂದ 10 ನೇ ತರಗತಿ), ಪರಿಶಿಷ್ಟ ಪಂಗಡ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಅಡ್ಯನಡ್ಕ ಬಂಟ್ವಾಳ ತಾಲೂಕು(5 ರಿಂದ 10 ನೇ ತರಗತಿ), ಪರಿಶಿಷ್ಟ ಪಂಗಡ ಆಶ್ರಯ ಶಾಲೆ ಕಡೆಶ್ವಲ್ಯಾ ಬಂಟ್ವಾಳ ತಾಲೂಕು(1 ರಿಂದ 5 ನೇ ತರಗತಿ), ಪರಿಶಿಷ್ಟ ಪಂಗಡ ಆಶ್ರಮ ಶಾಲೆ ಕುದ್ದು ಪದವು ಬಂಟ್ವಾಳ ತಾಲೂಕು(1 ರಿಂದ 5 ನೇ ತರಗತಿ). ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08255-230968 ಸಂಪರ್ಕಿಸಲು ಸಹಾಯಕ ನಿರ್ದೆಶಕರು(ಗ್ರೇಡ್ 2) ಸಮಾಜ ಕಲ್ಯಾಣ ಇಲಾಖೆ, ಬಂಟ್ವಾಳ ತಾಲೂಕು ಇವರ ಪ್ರಕಟಣೆ ತಿಳಿಸಿದೆ.

Also Read  ಸೆ. 25ರ ಜನತಾದರ್ಶನ ಕಾರ್ಯಕ್ರಮಕ್ಕೆ ವ್ಯವಸ್ಥಿತ ಸಿದ್ದತೆಗಳು- ಡಾ. ಆನಂದ್

error: Content is protected !!
Scroll to Top