ವಿಶೇಷಚೇತನ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಂದ ಡಿಪ್ಲೋಮಾ ಅರ್ಜಿ ಆಹ್ವಾನ

ಮಂಗಳೂರು ಮೇ 04( ನ್ಯೂಸ್ ಕಡಬ) newskadaba.com,);- ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಮೈಸೂರು, 2019-20ನೇ ಸಾಲಿನ ವಿಶೇಷಚೇತನ ವಿದ್ಯಾರ್ಥಿ /ವಿದ್ಯಾರ್ಥಿನಿಯರಿಂದ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಮೂರು ವರ್ಷದ ಅವಧಿಯ ಡಿಪ್ಲೋಮಾ ಕೋರ್ಸುಗಳು ಇಂತಿವೆ: ಆರ್ಕಿಟೆಕ್ಚರ್ ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ಸ್ ಮತ್ತು ಇಂಜಿನಿಯರಿಂಗ್, ಅನುದಾನಿತ ಕೋರ್ಸುಗಳು ಮತ್ತು ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಕೇಷನ್ಸ್ ಫಾರ್ ದಿ ವಿಷ್ಯುಯಲಿ ಇಂಪೇರ್ಡ್ ಅನುದಾನ ರಹಿತ ಕೋರ್ಸುಗಳು. ಪ್ರವೇಶ ಅರ್ಹತೆ ಕರ್ನಾಟಕ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾಣ ಪರೀಕ್ಷೆಯಲ್ಲಿ ಕನಿಷ್ಠ 35% ಅಂಕಗಳೊಂದಿಗೆ ತೇರ್ಗಡೆ ಹಾಗೂ ಮೂಳೆ ಮತ್ತು ಕೀಲು ಅಂಗವಿಕಲತೆ 40% ರಷ್ಟು ಹೊಂದಿದ್ದು ಮತ್ತು ಕಿವುಡು ಮತ್ತು ಮೂಗು ಅಂಗವಿಕಲತೆ 60% ಡಿಬಿ ಅಂಗವೈಕಲ್ಯತೆಯ ಲಕ್ಷಣಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ 1 ರಿಂದ 5ರ ವರೆಗಿನ ಕೋರ್ಸುಗಳ ಅವಕಾಶವಿದೆ. ಭಾಗಶ; ಮತ್ತು ಪೂರ್ಣ ಅಂಧತ್ವವನ್ನು ಹೊಂದಿದ ಅಭ್ಯರ್ಥಿಗಳಿಗೆ 2 ರಿಂದ 6ರ ವರೆಗಿನ ಎಲ್ಲಾ ಕೋರ್ಸುಗಳ ಅವಕಾಶವಿದೆ. ಭಾಗಶ ಮತ್ತು ಪೂರ್ಣ ಅಂಧತ್ವವನ್ನು ಹೊಂದಿದ ಅಭ್ಯರ್ಥಿಗಳು ಇಂಗ್ಲೀಷ್ ಬ್ರೈಲ್ ಭಾಷೆಯ ಜ್ಞಾನ ಹೊಂದಿದ್ದಲ್ಲಿ ಆದ್ಯತೆಯನ್ನು ನೀಡಲಾಗುವುದು. ಪಾಲಿಟೆಕ್ನಿಕ್ ಯಶಸ್ವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ತರಬೇತಿ ಕೇಂದ್ರದ ಮೂಲಕ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಲಾಗುತ್ತಿದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರುಗಳಿಗೆ ಪ್ರತ್ಯಕವಾದ ವಿದ್ಯಾಥಿನಿಲಯದ ಸೌಲಭ್ಯ ಹೊಂದಿದೆ. ಅರ್ಜಿಗಳನ್ನು www.jspda.org ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು, ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 15 ರೊಳಗಾಗಿ ಕಚೇರಿಗೆ ತಲುಪಿಸಬೇಕು. ಸಾಮಾನ್ಯ ವರ್ಗದಅಭ್ಯರ್ಥಿಗಳು ರೂ.100 ಹಾಗೂ ಎಸ್.ಸಿ. ಎಸ್.ಟಿ, ಸಿ-1 ವರ್ಗದವರಿಗೆ ರೂ. 50 ನಗದು ಅಥವಾ ಡಿಡಿ / ಎಂಒ ಮೂಲಕ ಮೈಸೂರಿನಲ್ಲಿ ಸಂದಾಯವಾಗುವಂತೆ ಕಳುಹಿಸಬೇಕು.ಹೆಚ್ಚಿನ ಮಾಹಿತಿಗಾಗಿ ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಮೈಸೂರು 57006, ವೆಬ್‍ಸೈಟ್www.jsspda.org,   ಇ-ಮೇಲ್ jsspda@gmail.com  ದೂರವಾಣಿ ಸಂಖ್ಯೆ: 0521-2548315, 2548316, ಮೂಲಕ ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರು ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಮೈಸೂರು 570006. ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group