ಮಂಗಳೂರು ಮೇ 4( ನ್ಯೂಸ್ ಕಡಬ) newskadaba.com,):- ಕೌಶಲ್ಯ ಅಭಿವೃಧ್ದಿ ತರಬೇತಿ ಕಾರ್ಯಕ್ರಮದಡಿ ಸಿಸ್ಕೊ ಐ.ಟಿ. ಎಸೆನ್‍ಶಿಯಲ್ಸ್, ಟ್ಯಾಲಿ ಇಖP 9, ಅಡ್ವಾನ್ಸ್‍ಡ್ ವೆಲ್ಡಿಂಗ್ ಟೆಕ್ನೋಲಜಿ, ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್ ಅಲ್ಪಾವದಿ ಕೋರ್ಸ್‍ಗಳಲ್ಲಿ ಕೌಶಲ್ಯ್ದ ತರಬೇತಿಯನ್ನು ಮಂಗಳೂರಿನ ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್ (ಕೆ.ಜಿ.ಟಿ.ಟಿ.ಐ) ಇಲ್ಲಿ ನೀಡಲಾಗುತ್ತಿದೆ.ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೆ ತರಬೇತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಯುವಕ / ಯುವತಿಯರಿಗೆ ಪ್ರವೇಶ ಉಚಿತವಾಗಿರುತ್ತದೆ. ಅರ್ಜಿಗಳನ್ನು ನಿಗಧಿತ ನಮೂನೆಯಲ್ಲಿ ಕೆ.ಜಿ.ಟಿ.ಟಿ.ಐ ಕಚೇರಿ ಮಂಗಳೂರು (ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ, 2ನೇ ಮಹಡಿ, ಕದ್ರಿಹಿಲ್ಸ್) ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2211477, 0824-2981877. ಸಂಪರ್ಕಿಸಬಹುದು ಎಂದು ನಿರ್ದೇಶಕರು, ಕೆ.ಜಿ.ಟಿ.ಟಿ.ಐ. ಮಂಗಳೂರು. ಇವರ ಪ್ರಕಟಣೆ ತಿಳಿಸಿದೆ.