ಶಕ್ತಿ ಕ್ಯಾನ್‍ಕ್ರಿಯೇಟ್’ ಶಿಬಿರದ ಸಮಾರೋಪ.

ಕಡಬ ಮೇ 02( ನ್ಯೂಸ್ ಕಡಬ) newskadaba.com,);- “ರಜಾಕಾಲದ ಶಿಬಿರಗಳು ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸಲು ಪೂರ್ಣ ಸಹಕಾರಿ”:- ಮಹಾಬಲೇಶ್ವರಎಂ.ಎಸ್
ಶಕ್ತಿನಗರ: ರಜಾಕಾಲದಲ್ಲಿ ಹಮ್ಮಿಕೊಳ್ಳುವ ಶಿಬಿರಗಳು ಮಕ್ಕಳ ವ್ಯಕ್ತಿತ್ವರೂಪಿಸಲು ಹಾಗೂ ಅವರಲ್ಲಿ ಹುದುಗಿರುವ ಸುಪ್ತ ಪ್ರತಿಭೆಗಳನ್ನು ಹೊರಗೆಳೆಯಲು ಪೂರ್ಣ ಸಹಕಾರಿಯಾಗುತ್ತಿವೆಎಂದುಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಕಾರ್ಯನಿರ್ವಹಣಾಧಿಕಾರಿ ಶ್ರೀ ಮಹಾಬಲೇಶ್ವರಎಂ.ಎಸ್ ಹೇಳಿದರು. ಮಂಗಳೂರು ಶಕ್ತಿನಗರದ ಶಕ್ತಿ ವಸತಿ ಶಾಲೆಯವರು ಬೇಸಿಗೆ ರಜಾಕಾಲದಲ್ಲಿ ಹಮ್ಮಿಕೊಂಡಿದ್ದ 20 ದಿನಗಳ ಕಾಲದ ಶಿಬಿರ ‘ಶಕ್ತಿ ಕ್ಯಾನ್‍ಕ್ರಿಯೇಟ್’ ಇದರ ಸಮಾರೋಪ ಸಮಾರಂಭದಲ್ಲಿಅವರು ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಕ್ಕಳ ಪ್ರತಿಭೆ, ಕೌಶಲ್ಯ, ಮಾನವ ಸಂಪನ್ಮೂಲ ಹಾಗೂ ಮೌಲ್ಯಗಳನ್ನು ಪೋಷಿಸುವ ಕೆಲಸವನ್ನು ಶಿಕ್ಷಕರು ಹಾಗೂ ಪೋಷಕರು ನಿರಂತರವಾಗಿ ಮಾಡಿದರೆಒಟ್ಟುರಾಷ್ಟ್ರದ ಸಂಪನ್ಮೂಲವನ್ನು ಹೆಚ್ಚಿಸಿದಂತೆ ಆಗುತ್ತದೆ, ಅದೇ ಶಿಕ್ಷಣದ ಮೂಲ ಉದ್ದೇಶಎಂದುಅವರು ಹೇಳಿದರು.ನಾಡಿನ ಹೆಸರಾಂತ ಭರತನಾಟ್ಯಕಲಾವಿದೆ ಹಾಗೂ ಶಿಕ್ಷಕಿ ಶ್ರೀಮತಿ ಸುಮಂಗಳಾ ರತ್ನಾಕರ್ ಮಾತನಾಡುತ್ತಾ ಮಕ್ಕಳ ಪ್ರತಿಭೆಗೆ ಅವಕಾಶ ಹಾಗೂ ವೇದಿಕೆಗಳನ್ನು ಒದಗಿಸುವಕಾರ್ಯ ಶಿಕ್ಷಕರು ಹಾಗೂ ಹೆತ್ತವರು ಮಾಡುತ್ತಾ ಬಂದಲ್ಲಿ ಮಕ್ಕಳು ದೇಶಕ್ಕೆಒಂದು ಆಸ್ತಿಯಾಗಬಲ್ಲರುಎಂದು ನುಡಿದರು.ಮಂಗಳೂರು ಆಕಾಶವಾಣಿಯ ನಿವೃತ್ತಉದ್ಘೋಷಕಿಶ್ರೀಮತಿ ಶಕುಂತಲಾಆರ್‍ಕಿಣಿಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ವ್ಯವಸ್ಥಿತವಾಗಿ ಹಮ್ಮಿಕೊಂಡ ಶಿಬಿರದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಶಕ್ತಿ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಸಂಜಿತ್ ನಾೈಕ್ ಸಮಾರೋಪ ಸಮಾರಂಭದಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಶಿಕ್ಷಣದಲ್ಲಿ ಪಠ್ಯ ಹಾಗೂ ಪಠ್ಯೇತರ ವಿಷಯಗಳಿಗೆ ಸಮಾನಆದ್ಯತೆ ನೀಡಬೇಕೆಂದುಕರೆಯಿತ್ತರು.
ಆರಂಭದಲ್ಲಿಶಾಲೆಯಪ್ರಾಂಶುಪಾಲೆ ವಿದ್ಯಾಕಾಮತ್ ಜಿ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಬಯಸಿದರು. ನಸೀಮ್ ಬಾನು ಅತಿಥಿಗಳನ್ನು ಪರಿಚಯಿಸಿದರು. ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ ಹಾಗೂ ಜಾನಪದ ವಿದ್ವಾಂಸರಮೇಶ್‍ಕಲ್ಮಾಡಿಅವರನ್ನುಇದೇ ಸಂದರ್ಭದಲ್ಲಿಗೌರವಿಸಲಾಯಿತು. ಶಿಬಿರಾಧಿಕಾರಿ ಪೂರ್ಣಿಮಆರ್.ಶೆಟ್ಟಿ ಶಿಬಿರದ ವರದಿ ಒಪ್ಪಿಸಿ, ಆಡಳಿತಾಧಿಕಾರಿ ಬೈಕಾಡಿಜನಾರ್ದನಆಚಾರ್ ಶಿಬಿರದ ಯಶಸ್ವಿಗೆ ಕಾರಣಕರ್ತರಾದವರನ್ನು ಅಭಿನಂದಿಸಿ ಮಾತನಾಡಿದರು. ಶಿಕ್ಷಕಿ ಸ್ವಾತಿ ಭರತ್‍ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join the Group

Join WhatsApp Group