ಬಂಟ್ವಾಳ ತಾಲೂಕು – ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ

(ನ್ಯೂಸ್ ಕಡಬ) newskadaba.com ಬಂಟ್ವಾಳ ಡಿ .17.    ಬಂಟ್ವಾಳ ತಾಲ್ಲೂಕು ನರಿಂಗಾನ ಗ್ರಾಮದ ಮುರತ್ತಗುಂಡಿ ಎಂಬಲ್ಲಿ ಈ ಹಿಂದೆ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದ     ಸಂ. 63 – ಇಸ್ಮಾಯಿಲ್  ರವರು ಇಕೆವೈಸಿ ನೀಡದ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಯನ್ನು ರದ್ದು ಪಡಿಸಿ ಆ ನ್ಯಾಯಬೆಲೆ ಅಂಗಡಿಯ  35 ಅಂತ್ಯೋದಯ,11 ಆದ್ಯತಾ  ಪಡಿತರ ಚೀಟಿಗಳು ಸೇರಿದಂತೆ ಒಟ್ಟು 212 ಪಡಿತರ ಚೀಟಿಗಳನ್ನು ತಾತ್ಕಾಲಿಕವಾಗಿ ಸಂ. 60 – ಅಬ್ಬಾಸ್, ನರಿಂಗಾನ ನ್ಯಾಯಬೆಲೆ ಅಂಗಡಿಗೆ  ಜೋಡಿಸಲಾಗಿರುತ್ತದೆ. ಪಡಿತರ ಚೀಟಿಗಳನ್ನು ಜೋಡಿಸಲ್ಪಟ್ಟ ನ್ಯಾಯಬೆಲೆ ಅಂಗಡಿಗೆ ಕಾರ್ಡುದಾರರು ಸುಮಾರು 6 ರಿಂದ 7 ಕಿ.ಮೀ. ಕ್ರಮಿಸಿ ಪಡಿತರ ಪಡೆಯಬೇಕಾಗಿರುವುದರಿಂದ, ಮುರತ್ತಗುಂಡಿ ಪ್ರದೇಶದಲ್ಲಿ  ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯುವ   ಅವಶ್ಯಕತೆ ಇದೆಯೆಂದು ವರದಿಯಲ್ಲಿ ತಿಳಿಸಿದ್ದು,  ಹೊಸ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಬಂಟ್ವಾಳ ತಹಶೀಲ್ದಾರರು ಶಿಫಾರಸ್ಸು ಮಾಡಿರುತ್ತಾರೆ. ಆದುದರಿಂದ ಕರ್ನಾಟಕ ಅಗತ್ಯ ವಸ್ತುಗಳ (ಸಾ.ವಿ.ಪ.) ನಿಯಂತ್ರಣ ಆದೇಶ 2016, 2ನೇ ತಿದ್ದುಪಡಿ ಆದೇಶ 2017 ಹಾಗೂ ತಿದ್ದುಪಡಿ ಆದೇಶ 2018ರ ಕ್ಲಾಸ್ 6(ಬಿ) ಯನ್ವಯ  ಅಧಿಸೂಚನೆಗಳಲ್ಲಿನ ಮಾರ್ಗಸೂಚಿಗಳಂತೆ ಬಂಟ್ವಾಳ ತಾಲ್ಲೂಕು ತಹಶೀಲ್ದಾರ್ ರವರ ಪ್ರಸ್ತಾವನೆಯನ್ನಾಧರಿಸಿ ಕಾರ್ಡುದಾರರ ಹಿತದೃಷ್ಟಿಯಿಂದ ಬಂಟ್ವಾಳ ತಾಲ್ಲೂಕು ನರಿಂಗಾನ ಗ್ರಾಮದ ಮುರತ್ತಗುಂಡಿ  ಎಂಬಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವ ಬಗ್ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹೊಸ ನ್ಯಾಯಬೆಲೆ ಅಂಗಡಿ ತೆರೆಯುವ ಬಗ್ಗೆ  ಆದೇಶದ ನಿಯಮ ದಂತೆ ಅರ್ಹ ಸಂಘ ಸಂಸ್ಥೆಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ನಿಗದಿತ ಅವಧಿಯೊಳಗೆ ಸಲ್ಲಿಸುವ ಅರ್ಜಿಗಳನ್ನು ಮೇಲಿನ ಆದೇಶದ ನಿಯಮ 6(ಬಿ) ಯಂತೆ ಈ ಕೆಳಗೆ ತಿಳಿಯ ಪಡಿಸಿರುವ ರೀತಿಯಲ್ಲಿ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು. ರಾಜ್ಯ ಸರಕಾರಿ ಸ್ವಾಮ್ಯದ ನಿಗಮಗಳು, ಕಂಪೆನಿಗಳು ಅಥವಾ ಗ್ರಾಮ ;ಪಂಚಾಯತಿಗಳು, ನಗರ ಸ್ಥಳೀಯ ಸಂಸ್ಥೆಗಳು, ಸಂಘಗಳು (ಸೊಸೈಟಿಗಳು)  ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘ ನಿಯಮಿತ (TAPCMS) ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ (VSSSN) ತೋಟಗಾರಿಕಾ ಉತ್ಪಾದಕರ ಸಹಕಾರ ಮಾರ್ಕೆಟಿಂಗ್ ಮತ್ತು ಸಂಸ್ಕರಣೆ ಸಂಘ ನಿಯಮಿತ(HOPCOMS) ನೋಂದಾಯಿತ ಸಹಕಾರಿ ಸಂಘಗಳು, ನೋಂದಾಯಿತ ಪ್ರಾಥಮಿಕ ಗ್ರಾಹಕರ ಸಹಕಾರಿ ಸಂಘ, ನೋಂದಾಯಿತ ನೇಕಾರರಸಹಕಾರಿಸಂಘ, ನೋಂದಾಯಿತ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ, ನೋಂದಾಯಿತ ವಿವಿಧೋದ್ದೇಶ ಸಹಕಾರಿ ಸಂಘ, ಅಂಗವಿಕಲರ ಕಲ್ಯಾಣ ಸಹಕಾರಿ ಸಂಘ. ಸಹಕಾರಿ ಸಂಘ ಅಥವಾ ಸಹಕಾರಿ ಬ್ಯಾಂಕುಗಳಿಂದ ನಡೆಸಲ್ಪಡುತ್ತಿರುವ ಬ್ಯಾಂಕುಗಳು.
   ಖಾಸಗಿ : ಅಂಗವಿಕಲರಿಗೆ (person with bench mark disability category), ತೃತೀಯ ಲಿಂಗಿಗಳು(person with bench mark disability category),  ಸಹಕಾರಿ ಸಂಘಗಳ ಅರ್ಹತೆಯ ಗುಣಮಟ್ಟ ನಿರ್ಧರಿಸಲು ಸದರಿ ಸಂಘಗಳಿಗೆ ನೀಡಲಾದ ಆಡಿಟ್ ಗ್ರೇಡ್ ‘ಎ’ ‘ ಬಿ’  ಹಾಗೂ ‘ಸಿ’ ಯನ್ನು ಪರಿಗಣಿಸಲ್ಪಡುವುದು. ಸಹಕಾರಿ ಸಂಘವು ಕನಿಷ್ಠ ಮೂರು ವರ್ಷಗಳಿಂದ ಚಾಲನೆಯಲ್ಲಿದ್ದು ಹಾಗೂ ಹಿಂದಿನ ಎರಡು ವರ್ಷಗಳಲ್ಲಿ ಕನಿಷ್ಠ ರೂ. 2 ಲಕ್ಷಗಳ ನಿರಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರಬೇಕು.
     ನೇರ ನೇಮಕಾತಿಗೆ ಅರ್ಹತೆ ಹೊಂದಿರುವವರು ನ್ಯಾಯಬೆಲೆ ಅಂಗಡಿ ಕೋರಿ ಅರ್ಜಿ ಸಲ್ಲಿಸಿದಲ್ಲಿ ಈ ಪ್ರಕಟಣೆ ರದ್ದಾಗುವುದು. ನಿಗದಿ ಪಡಿಸಿದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ನಮೂನೆ ಹಾಗೂ ಇತರೆ ಮಾಹಿತಿಯನ್ನು ಬಂಟ್ವಾಳ ತಾಲ್ಲೂಕು ಕಚೇರಿಯಿಂದ ಪಡೆಯಬಹುದಾಗಿದೆ.  ಡಿಸೆಂಬರ್ 14 ರಿಂದ 2019ನೇ ಜನವರಿ 13 ರವರೆಗೆ ಬಂಟ್ವಾಳ ತಾಲೂಕು ಕಚೇರಿಗೆ ನಿಗದಿತ ನಮೂನೆ ‘ಎ’  ಯಲ್ಲಿ ನಿಗದಿ ಪಡಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ದ.ಕ ಮಂಗಳೂರು ಇವರ ಪ್ರಕಟನೆ ತಿಳಿಸಿದೆ.
error: Content is protected !!
Scroll to Top