ಬೃಂದಾ ಪಿ.ಮುಕ್ಕೂರು,ವಿವೇಕಾನಂದ ಕಾಲೇಜು ಪುತ್ತೂರು
ಯುವಶಕ್ತಿ ದೇಶದ ಅಮೂಲ್ಯ ಸಂಪತ್ತು, ಶಕ್ತಿ. ೧೬ ರಿಂದ ೩೫ ವರ್ಷದೊಳಗಿನ ಪ್ರಾಯ ಅತ್ಯಂತ ಹುರುಪಿನ, ಉತ್ಸಾಹದ, ಸಾಽಸುವ ಛಲ ಹೊಂದಿರುವ ವಯಸ್ಸು. ಈ ವಯಸ್ಸಿನ ಯುವಕರು ಪರಸ್ಪರ ಸಂಘಟಿತರಾಗಿ ಯುವಕ-ಯುವತಿ ಮಂಡಲಗಳ ಮೂಲಕ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹೀಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನಿಸ್ವಾರ್ಥವಾಗಿ ಶ್ರಮಿಸುತ್ತಿರುವುದು ಉತ್ತಮ ವಿಚಾರ. ಯುವಕ ಯುವತಿ ಮಂಡಲಗಳು ಬಲಿಷ್ಠವಾಗಿದ್ದಲ್ಲಿ ಸಮಾಜ ಸುಸ್ಥಿತಿಯಲ್ಲಿರಲಿದೆ. ಸಮಾಜದ ಅಭಿವೃದ್ಧಿ, ಬದಲಾವಣೆಯಲ್ಲಿ ಇಂತಹ ಸಂಘಟನೆಗಳ ಪಾತ್ರ ಮಹತ್ವವಾದುದು, ಅವಿಸ್ಮರಣೀಯವಾದುದು.
ಇಂತಹ ಒಂದು ಕಾರ್ಯದಲ್ಲಿ ಪುತ್ತೂರು, ಸುಳ್ಯ ತಾಲೂಕಿನ ಅನೇಕ ಯುವಕ-ಯುವತಿ ಮಂಡಲಗಳು ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಕಾರ್ಯನಿರ್ವಹಿಸಿವೆ. ಭಾರತ ಸರಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು ಇದರ ಮುಖಾಂತರ ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್‌ಶಿಪ್ ಕಾರ್ಯಕ್ರಮದಡಿಯಲ್ಲಿ ನೋಂದಾವಣೆಗೊಂಡ ಯುವಕ-ಯುವತಿ ಹಾಗೂ ಮಹಿಳಾ ಮಂಡಲಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ತಮ್ಮೂರಿನ ಪರಿಸರ ಸ್ಚಚ್ಛಗೊಳಿಸುವಲ್ಲಿ ಅವಿರತವಾಗಿ ದುಡಿದಿವೆ. ವಿವಿಧೆಡೆ ಯುವಕ-ಯುವತಿ ಮಂಡಲಗಳಿಂದ ಸ್ವಚ್ಛತೆ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳು ನಡೆದಿದೆ.
ಸ್ವಚ್ಛತೆ
ಯುವಕ ಯುವತಿ ಮಂಡಲಗಳು ತಮ್ಮ ಪರಿಸರ, ಬಸ್ ನಿಲ್ದಾಣ, ಜಂಕ್ಷನ್, ಶ್ರದ್ಧಾಕೇಂದ್ರ, ಶಾಲಾ ಪರಿಸರ ಹೀಗೆ ಎಲ್ಲೆಡೆ ಸ್ವಚ್ಛತಾ ಕಾರ್ಯ ಕೈಗೊಂಡಿರುವುದು ಮಾತ್ರವವಲ್ಲದೇ, ಸ್ವಚ್ಛತೆ ಕುರಿತಾದ ಮಾಹಿತಿ, ಜಾಗೃತಿ, ವಾಹನ ಜಾಥಾ, ಸ್ವಚ್ಛತಾ ಮೇಳ, ಬೀದಿ ನಾಟಕ, ಗೋಡೆ ಬರಹ, ಮನೆಮನೆಗೆ ತೆರಳಿ ಅರಿವು ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿವೆ.
ಸರಕಾರದ ಅನುದಾನವಾಗಿದ್ದಲ್ಲಿ ?
ಪುತ್ತೂರು ಸುಳ್ಯ ಭಾಗದಲ್ಲಿ ಯುವಕ ಯುವತಿ ಮಂಡಲಗಳು ಮಾಡಿದ ಸ್ವಚ್ಛತಾ ಕಾರ್ಯ, ಶೌಚಾಲಯ ನಿರ್ಮಾಣಕ್ಕಾಗಿ ಒಂದು ವೇಳೆ ಸರಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದಲ್ಲಿ ಕೋಟಿ ರೂ. ವೆಚ್ಚವಾಗುತ್ತಿತ್ತು. ಅದಕ್ಕಾಗಿ ಅಽಕಾರಿಗಳ ಬಳಿ ಅದೆಷ್ಟೋ ಬಾರಿ ಅಲೆದಾಡಬೇಕೋ ಹೇಳತೀರದು. ಆದರೆ, ಯುವಕ ಮಂಡಲಗಳು ತಮ್ಮ ಸ್ವಂತ ಖರ್ಚಿನಿಂದಲೇ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ತೊಡಗಿಸಿಕೊಂಡಿರುವುದು ಮಾದರಿ ಕಾರ್ಯ.
ಒಕ್ಕೂಟದ ಸಹಯೋಗ
ತಾಲೂಕಿನ ಯುವಕ-ಯುವತಿ ಮಂಡಲಗಳ ನೋಂದಾವಣೆ ಜವಾಬ್ದಾರಿಯನ್ನು ತಾಲೂಕು ಯುವಜನ ಒಕ್ಕೂಟ ವಹಿಸಿಕೊಂಡು ನೋಂದಾವಣೆ ಪ್ರಕ್ರಿಯೆ ಮಾಡಿರುತ್ತದೆ. ಒಕ್ಕೂಟದಲ್ಲಿ ಬಿಕ್ಕಟ್ಟಿಗೆ ಅವಕಾಶವಿಲ್ಲ ಎಂಬಂತೆ ಇಡೀ ತಾಲೂಕಿನ ಯುವಕ-ಯುವತಿ ಮಂಡಲಗಳನ್ನು ಒಂದುಗೂಡಿಸುತ್ತದೆ. ಯುವಕ-ಯುವತಿ ಮಂಡಲಗಳಿಗೆ ಸೂಕ್ತ ಮಾರ್ಗದರ್ಶನ, ಸಲಹೆ, ಪ್ರೊತ್ಸಾಹ ನೀಡುವುದು ಮಾತ್ರವಲ್ಲದೇ ಅತ್ಯುತ್ತಮ ಸಂಘಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ.
ಸ್ವಚ್ಛತಾ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಯುವಕ-ಯುವತಿ ಮಂಡಲಗಳು
ಪುತ್ತೂರು ತಾಲೂಕಿನಲ್ಲಿ ಶ್ರೀ ಷಣ್ಮುಖ ಯುವಕ ಮಂಡಲ ಸರ್ವೆ,ತುಡರ್ ಯುವಕ ಮಂಡಲ ಕಾವು
ವಿಶ್ವಜ್ಞ ಯುವಕ ಮಂಡಲ ಕಾಣಿಯೂರು,ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಕಾಣಿಯೂರು
ಚಿಗುರು ಯುವಶಕ್ತಿ ಸೊರಕೆ-ಸರ್ವೆ,ಯುವ ಪ್ರೇರಣ ಕ್ರೀಡಾ ಮತ್ತು ಸೇವಾ ಸಂಘ ಪುತ್ತೂರು ,ನೇತಾಜಿ ಯುವಕ ಮಂಡಲ ಕೂಡುರಸ್ತೆ,ಸವಣೂರು ಯುವಕ ಮಂಡಲ-ಸವಣೂರು ,ಫ್ರೆಂಡ್ಸ್ ಕ್ಲಬ್ ಮುಕ್ವೆ-ನರಿಮೊಗರು, ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು-ಪುರುಷರಕಟ್ಟೆ,ನವೋದಯ ಮಹಿಳಾ ಮಂಡಲ ಬನ್ನೂರು,ಅರ್ಪಿತಾ ಯುವತಿ ಮಂಡಲ ಕುಮಾರಮಂಗಲ,ಕಣ್ವರ್ಷಿ ಯುವತಿ ಮಂಡಲ ಕಾಣಿಯೂರು ಕಾರ್ಯಕ್ರಮಗಳನ್ನು ನಡೆಸಿದೆ.
ಸುಳ್ಯ ತಾಲೂಕಿನ ಗರುಡಾ ಯುವಕ ಮಂಡಲ ಚೊಕ್ಕಾಡಿ,ಕನಕಮಜಲು ಯುವಕ ಮಂಡಲ,ಮಿತ್ರಾ ಬಳಗ ಕಾಯರ್ತೋಡಿ, ಫ್ರೆಂಡ್ಸ್ ಕ್ಲಬ್ ಪೈಲಾರು ನಡೆಸಿದೆ.
ಸ್ವಚ್ಛತಾ ಕಾರ್ಯದಲ್ಲಿ ಮುಂಚೂಣಿಯಾಗಿ ಗುರುತಿಸಿಕೊಂಡ ಯುವಕ-ಯುವತಿ ಮಂಡಲಗಳಿಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ನೀಡಿ ಕ್ರಮವಾಗಿ ರೂ.೩೦ ಸಾವಿರ, ರೂ.೨೦ ಸಾವಿರ, ರೂ. ೧೦ ಸಾವಿರ ನೀಡಿ, ನೆಹರು ಯುವ ಕೇಂದ್ರದ ವತಿಯಿಂದ ಸಮ್ಮಾನಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಿಯಾದ ತಂಡವು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿದ್ದು ಅಲ್ಲಿಯೂ ಆಯ್ಕೆಯಾದಲ್ಲಿ ಪ್ರಥಮ ಸ್ಥಾನಕ್ಕಾಗಿ ರೂ. ೫೦ ಸಾವಿರ, ದ್ವಿತೀಯ ಸ್ಥಾನಕ್ಕಾಗಿ ರೂ. ೩೦ ಸಾವಿರ, ತ್ರತೀಯ ಸ್ಥಾನಕ್ಕಾಗಿ ರೂ. ೨೦ ಸಾವಿರ ಪಡೆಯಲಿವೆ. ರಾಜ್ಯ ಮಟ್ಟದ ತಂಡಗಳು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಲಿದ್ದು, ಅಲ್ಲಿಯೂ ಆಯ್ಕೆಯಾದಲ್ಲಿ ಪ್ರಥಮವಾಗಿ ರೂ.೨ ಲಕ್ಷ, ದ್ವಿತೀಯವಾಗಿ ರೂ. ೧ ಲಕ್ಷ, ತೃತೀಯವಾಗಿ ರೂ. ೫೦ ಸಾವಿರ ಬಹುಮಾನವಾಗಿ ಪಡೆಯಯಲಿವೆ.
ಜಿಲ್ಲೆಯಲ್ಲಿ ಒಟ್ಟು ೬೪ ಯುವಕ ಯುವತಿ ಮಂಡಲಗಳು ಮತ್ತು ಸುಮಾರು ೩೪ ಮಂದಿ ವೈಯಕ್ತಿಕವಾಗಿ ತಮ್ಮ ಹೆಸರನ್ನು ಎನ್‌ವೈಕೆಯಲ್ಲಿ ನೋಂದಾವಣೆ ಮಾಡಿಕೊಂಡಿವೆ .
– ಜೆಸಿಂತಾ ಡಿ’ಸೋಜಾ ,ಸಮನ್ಯಯಾಽಕಾರಿ ನೆಹರು ಯುವ ಕೇಂದ್ರ ಮಂಗಳೂರು
ತಮ್ಮೂರಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಯುವಕ-ಯುವತಿ ಮಂಡಲಗಳ ಸಹಕಾರ ಶ್ಲಾಘನೀಯ. ಎನ್‌ವೈಕೆಯಿಂದ ಸೀಮಿತ ಅನುದಾನ ಲಭ್ಯವಾದರೂ ಅದು ನೇರವಾಗಿ ಯುವಕ-ಯುವತಿ ಮಂಡಗಳ ಖಾತೆಗೆ ಜಮೆಯಾಗಲಿದೆ. ಎನ್‌ವೈಕೆಯಿಂದ ಕ್ರೀಡಾ ಸಾಮಾಗ್ರಿ ದೊರೆತಲ್ಲಿ ನೋಂದಾವಣೆಗೊಂಡ ಯುವಕ-ಯುವತಿ ಮಂಡಲಗಳಿಗೆ ಹಂಚಲಾಗುವುದು.
-ಸುರೇಶ್ ರೈ ಸೂಡಿಮುಳ್ಳು
ಅಧ್ಯಕ್ಷರು, ಜಿಲ್ಲಾ ಯುವಜನ ಒಕ್ಕೂಟ