ಮಾಡಾವು 110 ಕೆ.ವಿ ವಿದ್ಯುತ್ ಸಬ್‍ಸ್ಟೇಷನ್‍ಗೆ ಸುಳ್ಯ ಶಾಸಕ ಅಂಗಾರ ಭೇಟಿ

Newskadaba.comಮಾಡಾವು ;ಕಳೆದ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಾಡಾವು 110 ಕೆ.ವಿ ವಿದ್ಯುತ್ ಸಬ್‍ಸ್ಟೇಷನ್ ಕಾಮಗಾರಿ ಆರಂಭವಾಗಿದ್ದು ಆ.6 ರಂದು ಸುಳ್ಯ ಶಾಸಕ ಎಸ್.ಅಂಗಾರರವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ಕೆಪಿಟಿಸಿಎಲ್ ಅಕಾರಿಗಳಿಂದ ಮಾಹಿತಿ ಪಡೆದುಕೊಂಡ ಶಾಸಕರು ವಿದ್ಯುತ್ ಸಬ್‍ಸ್ಟೇಷನ್ ಆರಂಭಕ್ಕೆ ಇರುವ ತೊಂದರೆಗಳು ಮತ್ತು ವಿದ್ಯುತ್ ಲೈನ್ ಹಾದು ಹೋಗುವ ದಾರಿಯ ಬಗ್ಗೆ ಇದ್ದ ವ್ಯಾಜ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರ ಅಗತ್ಯ, ನಾವು ಇಂದು ಸೌಕರ್ಯಗಳನ್ನು ಪಡೆದುಕೊಂಡಿದ್ದರೆ ಅದರಿಂದ ಇನ್ನೊಬ್ಬರಿಗೆ ತೊಂದರೆಯಾಗಿರಬಹುದು ಅದೇ ರೀತಿ ನಾವು ಇನ್ನೊಬ್ಬರಿಗೆ ಸೌಕರ್ಯ ನೀಡುವಲ್ಲಿ ಸ್ವಲ್ಪಮಟ್ಟಿನ ತೊಂದರೆಯನ್ನು ಸಹಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಕ್ಷೇತ್ರದ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ ಎಂದ ಅವರು, ವಿದ್ಯುತ್ ಲೈನ್ ಹಾದು ಹೋಗುವ ಬಗ್ಗೆ ಜಾಗದ ವಾರೀಸುದಾರರು ಹೈಕೋರ್ಟ್‍ನಲ್ಲಿ ದಾವೆ ಹೂಡಿರುವ ಬಗ್ಗೆ ವಾರೀಸುದಾರರಲ್ಲಿ ಮಾತುಕತೆ ಮೂಲಕ ಅಥವಾ ಕಾನೂನು ಪ್ರಕಾರ ದೂರು ಹಿಂತೆಗೆಯುವ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದರು. ಮಾಡಾವು ಸಬ್‍ಸ್ಟೇಷನ್ ಕಾಮಗಾರಿಯನ್ನು ಗುತ್ತಿಗೆ ವಹಿಸಿಕೊಂಡವರು ನಿಗದಿಗೊಳಿಸಿದ ಅವಯಲ್ಲೇ ಮುಗಿಸಿಕೊಡಬೇಕು ಎಂದರು. ಕೆಪಿಟಿಸಿಎಲ್ ಸೀನಿಯರ್ ಎಕ್ಸಿಕ್ಯೂಟ್ ಇಂಜಿನಿಯರ್ ಪಿ.ಡಿ.ಬಿ ರಾವ್‍ರವರು ಶಾಸಕರಿಗೆ ಮಾಹಿತಿ ಕಾಮಗಾರಿ ಮಾಹಿತಿ ನೀಡಿದರು. ಮುರಳೀಧರ ಶ್ಯಾನ್‍ಭಾಗ್ ಕೈಕಾರ, ಭಾಗ್ಯವತಿ ಮತ್ತು ಪರಮೇಶ್ವರ ಎಂಬವರುಗಳು ಲೈನ್ ಎಳೆಯುವುದರ ವಿರುದ್ಧ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದು ಇದರಿಂದ ತೊಂದರೆಯಾಗಿದೆ. ಆದ್ದರಿಂದ ಇವರು ಕೊಟ್ಟಿರುವ ದೂರನ್ನು ಹಿಂತೆಗೆಯುವಂತೆ ಶಾಸಕರು ಮಾತುಕತೆ ನಡೆಸಬೇಕು ಎಂದು ಕೇಳಿಕೊಂಡರು. ಈ ಬಗ್ಗೆ ಶಾಸಕರು ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಟಿಸಿಎಲ್ ಪುತ್ತೂರು ಸ್ಟೇಷನ್‍ನ ಎಇಇ ಅಭಿಜಿತ್ ಶೆಟ್ಟಿ, ಮಂಗಳೂರು ಎಇಇ ಸತೀಶ್,ಮಂಗಳೂರು ಇಇ ಗಂಗಾಧರ್, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಬಿಜೆಪಿ ಮಂಡಲ ಕಾರ್ಯದರ್ಶಿ ಸುಭೋದ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಮುಳಿಯ ಕೇಶವ, ಪಿ.ಜಿ.ಎಸ್.ಎನ್ ಪ್ರಸಾದ್, ಕುಶಾಲಪ್ಪ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಮಾಡಾವು 110 ಕೆ.ವಿ ವಿದ್ಯುತ್ ಸಬ್‍ಸ್ಟೇಷನ್ ಕಾಮಗಾರಿ ವಹಿಸಿಕೊಂಡವರು ನಿಗದಿತ ಅವಯಲ್ಲಿ ಕಾಮಗಾರಿ ಮುಗಿಸಿಕೊಡಬೇಕು. ಲೈನ್ ಹಾದು ಹೋಗುವಲ್ಲಿನ ಅಡೆತಡೆಗಳ ಬಗ್ಗೆ ಸಂಬಂಧಪಟ್ಟ ಜಾಗದವರಲ್ಲಿ ಮಾತುಕತೆ ನಡೆಸುತ್ತೇನೆ. ಈ ಬಗ್ಗೆ ಜಿಲ್ಲಾಕಾರಿ, ಅರಣ್ಯ ಇಲಾಖಾ ಅಕಾರಿಗಳಲ್ಲಿಯೂ ಮಾತುಕತೆ ನಡೆಸುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಜನರ ಸಹಕಾರ ಬಹಳ ಅಗತ್ಯ, ಸಾರ್ವಜನಿಕರು ಸಹಕಾರ ಕೊಡಬೇಕು ಎಂಬುದು ನನ್ನ ಮನವಿ”
– ಎಸ್.ಅಂಗಾರ, ಶಾಸಕರು, ಸುಳ್ಯ ವಿಧಾನಸಭಾ

error: Content is protected !!

Join the Group

Join WhatsApp Group