ಕುಮಾರಮಂಗಲ ; ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ

Newskadaba.comಸವಣೂರು : ಮಕ್ಕಳು ತಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿಯೊಂದು ಅತ್ಯುತ್ತಮ ವೇದಿಕೆ. ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಕಾರ್ಯ ಪ್ರತಿಭಾ ಕಾರಂಜಿಗಳ ಮೂಲಕವಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಕೇವಲ ಸ್ಪರ್ದೇಗೆ ಸೀಮಿತವಾಗಬಾರದು ಎಂದು ಪುತ್ತೂರು ತಾ.ಪಂ.ಉಪಾಧ್ಯಕ್ಷೆ ಕು.ರಾಜೇಶ್ವರಿ ಕನ್ಯಾಮಂಗಲ ಹೇಳಿದರು.
ಅವರು ಆ.7 ರಂದು ಕ್ಷೇತ್ರ ಶಿಕ್ಷಣಾ„ಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಸವಣೂರು ಇವುಗಳ ಆಶ್ರಯದಲ್ಲಿ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.
ಪರಿಪೂರ್ಣತೆ ಪಡೆಯಲು ಸಹಕಾರಿ
ಅಧ್ಯಕ್ಷತೆ ವಹಿಸಿದ್ದ ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ. ಮಾತನಾಡಿ, ಪಠ್ಯ ಚಟುವಟಿಕೆಯಿಂದ ಹೊರತಾಗಿ ಮಕ್ಕಳಲ್ಲಿ ಹುದುಗಿರುವ ಸಾಂಸ್ಕøತಿಕ ಅನನ್ಯತೆ, ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಪ್ರತಿಭಾ ಕಾರಂಜಿ ಮೂಲಕವಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂತಹ ಅವಕಾಶ ದೊರೆಯುವ ಮೂಲಕ ವಿದ್ಯಾರ್ಥಿಗಳು ಪರಿಪೂರ್ಣತೆ ಹೊಂದಲು ಸಾಧ್ಯ ಎಂದರು.
ವೇದಿಕೆಯಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಪಿ.ಎಂ., ಕುಮಾರಮಂಗಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ತಾರಾಮಣಿ, ಬಿಆರ್‍ಪಿ ಸವಿತಾ ಗುಜರನ್, ಬಿಐಇಆರ್‍ಟಿ ತನುಜಾ, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾ ನಾಗರಾಜ್ ನಿಡ್ವಣ್ಣಾಯ, ವೇದಾವತಿ ಅಂಜಯ, ಕುಮಾರಮಂಗಲ ಅರ್ಪಿತಾ ಯುವತಿ ಮಂಡಲದ ಅಧ್ಯಕ್ಷೆ ಜಿಸ್ಮಿತಾ ಕೆ.ಆರ್‍ಉಪಸ್ಥಿತರಿದ್ದರು.
ಸವಣೂರು ಕ್ಲಸ್ಟರ್ ಸಿಆರ್‍ಪಿ ವೆಂಕಟೇಶ್ ಅನಂತಾಡಿ ಸ್ವಾಗತಿಸಿ,ವಂದಿಸಿದರು.

error: Content is protected !!
Scroll to Top