ಪುಣ್ಚಪ್ಪಾಡಿ :ಅಂಗನವಾಡಿ ಪಕ್ಕದಲ್ಲಿದೆ ಅಪಾಯಕಾರಿ ಮರ ಕ್ರಮ ಕೈಗೊಳ್ಳದ ಇಲಾಖೆ

Newskadaba.comಸವಣೂರು : ಪುಣ್ಚಪ್ಪಾಡಿ ಅಂಗನವಾಡಿ ಕೇಂದ್ರದ ಪಕ್ಕದಲ್ಲಿ ಅಪಾಯಕಾರಿ ಮರವಿದ್ದು ಅದನ್ನು ತೆರವುಗೊಳಿಸಬೇಕಿದೆ.ಈ ಕುರಿತು ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಮರತೆರವು ಕುರಿತಂತೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಕ್ಕಳ ಪೆÇೀಷಕರು ತಿಳಿಸಿದ್ದಾರೆ.
4 ಮರಗಳು ಅಪಾಯಕಾರಿಯಾಗಿದೆ
ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ಇರುವ 4 ದೊಡ್ಡ ಮರಗಳು ಅಪಾಯಕಾರಿಯಾಗಿ ಪರಿಣಮಿಸಿದ್ದು ,ಗಾಳಿ-ಮಳೆ ಸಂದರ್ಭದಲ್ಲಿ ಪುಟಾಣಿಗಳು ಭಯದಲ್ಲೇ ಕಾಲ ಕಳೆಯುವಂತಾಗಿದೆ.ಅಂಗನವಾಡಿ ಕೇಂದ್ರದ ಪಕ್ಕದಲ್ಲೇ ಇರುವ ಮರವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಯಾಕೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂಬುದು ಪೆÇೀಷಕರ ಅಳಲು
22 ಪುಟಾಣಿಗಳು
ಪ.ಜಾ,ಪಂ.ದವರೇ ಹೆಚ್ಚಿರುವ ಪುಣ್ಚಪ್ಪಾಡಿ ಗ್ರಾಮದಲ್ಲಿರುವ ಈ ಅಂಗನವಾಡಿ ಕೇಂದ್ರದಲ್ಲಿ 22 ಪುಟಾಣಿಗಳು ತಮ್ಮ ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದಾರೆ.ಈ ಮಕ್ಕಳು ಗಾಳಿ-ಮಳೆ ಸಂಧರ್ಬದಲ್ಲಿ ಭಯದಲ್ಲೇ ಇರುವಂತಹ ಸ್ಥಿತಿ ಇದೆ
ಮರದ ಕೆಳಗೆ ವಿದ್ಯುತ್ ತಂತಿ,ಕಂಬ
ಈ ಅಪಾಯಕಾರಿ ಮರವಿರುವ ಕೆಳಗೆ ವಿದ್ಯುತ್ ತಂತಿ ಹಾದುಹೋಗಿದ್ದು,ಮರ ಬಿದ್ದರೆ ವಿದ್ಯುತ್ ತಂತಿಯ ಜತೆಗೆ ವಿದ್ಯುತ್ ಕಂಬಕ್ಕೂ ಹಾನಿಯಾಗುವ ಸಾಧ್ಯತೆ ಇದೆ.ವಿದ್ಯುತ್ ತಂತಿಯ ಮೇಲೆ ಮರ ಬಿದ್ದರೆ ಆಗುವ ಅನಾಹುತವನ್ನು ಊಹಿಸಲೂ ಅಸಾಧ್ಯ.ಇದರಿಂದಾಗಿ ಈ ಮರವನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಬೇಕಿದೆ.
ಗ್ರಾಮ ಸಭೆಯಲ್ಲಿ ಪ್ರಸ್ತಾಪ
ಈ ಸಮಸ್ಯೆಯ ಕುರಿತು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಸವಣೂರು ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದು ,ಈವರೆಗೂ ಮರತೆರವುಗೊಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ.

Also Read  ಕಡಬ: ನಕಲಿ ನೋಟು ಪತ್ತೆ..!

ಹಲವು ಬಾರಿ ಮನವಿ ಮಾಡಲಾಗಿದೆ
ಅಂಗನವಾಡಿ ಕೇಂದ್ರದ ಪಕ್ಕದಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಗ್ರಾ.ಪಂ.ಸಾಮಾನ್ಯ ಸಭೆ,ವಾರ್ಡ್ ಸಭೆ,ಮಕ್ಕಳ ಗ್ರಾಮ ಸಭೆಯಲ್ಲೂ ನಿರ್ಣಯ ಕೈಗೊಂಡು ಅರಣ್ಯ ಇಲಾಖೆಗೆ ಬರೆದುಕೊಳ್ಳಲಾಗಿದೆ.ಅಲ್ಲದೆ ಸವಣೂರು-ಕುಮಾರಮಂಗಲ-ಮಾಡಾವು ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನೂ ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದ್ದು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸವಣೂರು ಗ್ರಾ.ಪಂ.ನ ಹಿರಿಯ ಸದಸ್ಯ ಗಿರಿಶಂಕರ ಸುಲಾಯ ತಿಳಿಸಿದ್ದಾರೆ.

Also Read  ಮಾಜಿ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ ನಿಧನ

ಪರಿಶೀಲಿಸಿ ಕ್ರಮ
ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ನರಿಮೊಗರು ವಲಯ ಅರಣ್ಯಾ„ಕಾರಿ ಕುಮಾರಸ್ವಾಮಿ ತಿಳಿಸಿದ್ದಾರೆ.

error: Content is protected !!
Scroll to Top