ಬರೆಪ್ಪಾಡಿ- ಪಳ್ಳತ್ತಾರು ರಸ್ತೆ ಸಂಪೂರ್ಣ ಕೆಸರುಮಯ-ಗಿಡನೆಟ್ಟು ಗ್ರಾಮಸ್ಥರ ಪ್ರತಿಭಟನೆ

NewsKadaba ಕಾಣಿಯೂರು: ಬರೆಪ್ಪಾಡಿ- ಪಳ್ಳತ್ತಾರು ಸಂಪರ್ಕ ರಸ್ತೆಯು ತೀರ ಹದಗೆಟ್ಟಿದ್ದು, ಸಂಪೂರ್ಣ ಕೆಸರುಮಯಗೊಂಡಿದೆ. ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯು ದುಸ್ಥಿತಿಯಿಂದ ಬೇಸತ್ತ ಗ್ರಾಮಸ್ಥರು ಕೆಸರುಮಯಗೊಂಡ ರಸ್ತೆಯಲ್ಲಿ ಬಾಳೆಗಿಡ ಹಾಗೂ ಇತರ ಗಿಡಗಳನ್ನು ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯೂ ಮಳಗೆ ರಸ್ತೆ ಸಂಪೂರ್ಣ ಕೆಟ್ಟುಹೋಗಿರುವುದರಿಂದ ಶಾಲಾ ಮಕ್ಕಳಿಗೂ ನಡೆದುಕೊಂಡು ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ದಿನಂಪ್ರತಿ ಹಲವಾರು ವಾಹನಗಳು ಓಡಾಟ ನಡೆಸುತ್ತಿದೆ. ಮಾರ್ಗಕ್ಕೆ ಚರಂಡಿಯ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಮಳೆ ನೀರು ಮಾರ್ಗದಲ್ಲೆ ಹರಿಯುತ್ತಿದೆ. ಇದೀಗ ಕೆಸರುಮಯಗೊಂಡ ರಸ್ತೆಯಲ್ಲಿ ಬಾಳೆಗಿಡ ಸೇರಿದಂತೆ ಇತರ ಗಿಡಗಳನ್ನು ನೆಟ್ಟು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದ್ದಾರೆ. ರಸ್ತೆಯನ್ನು ಕೂಡಲೇ ಸಂಬಂಧಪಟ್ಟವರು ದುರಸ್ಥಿಗೆ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Also Read  ದ.ಕ. ಜಿಲ್ಲೆಯಲ್ಲಿ74.87% ಮತದಾನ ➤ ಉಡುಪಿಯಲ್ಲಿ 78.46 ಶೇ. ಮತದಾನ

ಬೆಳಂದೂರು ಗ್ರಾಮಕ್ಕೆ ಒಳಪಟ್ಟ ಪಳ್ಳತ್ತಾರು ಎಂಬಲ್ಲಿ ಸುಮಾರು 200-300 ಮನೆಗಳಿದ್ದು, ಪ್ರಾಥಮಿಕ ಶಾಲೆ, ಮಸೀದಿ ಹೊಂದಿದ್ದು, ಮಾಹನದ ವ್ಯವಸ್ಥೆಗಳಿವೆ. ರಸ್ತೆಗಳ ಅಭಿವೃದ್ಧಿ ಮಾತ್ರ ಇಲ್ಲ. ಅದೇ ರಸ್ತೆಗಳ ಮೂಲಕ ಶಾಲಾ ವಾಹನಗಳು ಸಂಚಾರಿಸಬೇಕಾಗುತ್ತದೆ. ಈ ಗ್ರಾಮದಲ್ಲಿ ಹಲವೆಡೆ ಡಾಮಾರು ಕಾಣದ ರಸ್ತೆಗಳಿವೆ. ಒಂದು ದಾರಿ ದೀಪವು ಕೂಡಾ ಕಾಣಲು ಅಸಾಧ್ಯ. ಪಳ್ಳತ್ತಾರು ರಸ್ತೆಯೆಂಬುದು ಡಾಮಾರು ಕಾಣದ ರಸ್ತೆಯಾಗಿವೆ. ಈ ಬಗ್ಗೆ ಸಂಬಂಧಪಟ್ಟವರು ತಕ್ಷಣ ಕ್ರಮಕೈಗೊಳ್ಳಬೇಕು.
ಸೆಲಿಂ ಬನಾರಿ
ಸ್ಥಳೀಯರು

error: Content is protected !!
Scroll to Top