ಮಂಗಳೂರು: ನಿಲ್ಲಿಸಿದ್ದ ಕಾರುಗಳ ಮೇಲೆ ಬಿದ್ದ ಬೃಹತ್ ಮರ ► ನಾಲ್ಕು ಕಾರುಗಳು ಜಖಂ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.18. ನಿನ್ನೆ ರಾತ್ರಿ ಸುರಿದ ಗುಡುಗು ಮಿಂಚು ಸಹಿತ ಭಾರೀ ಗಾಳಿ ಮಳೆಗೆ ಅತ್ತಾವರದ ಬಾಬುಗುಡ್ಡೆ ಬಳಿ ಭಾರೀ ಮರವೊಂದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಮೇಲೆ ಉರುಳಿ ಬಿದ್ದು, 4 ಕಾರುಗಳು ಜಖಂಗೊಂಡಿವೆ.

ಬಾಬುಗುಡ್ಡೆಯಲ್ಲಿ ಬೃಹತ್ ಮಾವಿನ ಮರವೊಂದು ಪಕ್ಕದಲ್ಲಿ ಇದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಮೇಲೆ ಬಿದ್ದಿದ್ದು, ಇದರ ಜೊತೆ ಮೂರು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಅಲ್ಲೇ ನಿಲ್ಲಿಸಲಾಗಿದ್ದ ಕಾರುಗಳ ಮೇಲೆ ಮರವು ಉರುಳಿದ್ದರಿಂದ ನಾಲ್ಕು ಕಾರುಗಳು ಜಖಂಗೊಂಡಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ  ಸಿಬ್ಬಂದಿಗಳು ಹಾಗೂ ಸ್ಥಳೀಯರು ಬಂದು ತೆರವು ಕಾರ್ಯವನ್ನು ಮಾಡಿದ್ದಾರೆ.

Also Read  ಬೆಳ್ತಂಗಡಿ: ನೇತ್ರಾವತಿ ಶಿಖರದ ಬಳಿ ಕಾಡ್ಗಿಚ್ಚು-ಸಾವಿರಾರು ಎಕರೆ ಸಸ್ಯವರ್ಗ ನಾಶ

error: Content is protected !!
Scroll to Top