ಸವಣೂರು: ಶಾಸಕ ಅಂಗಾರರ ಕಾರ್ಯವೈಖರಿಗೆ ಬೇಸತ್ತ ಬಿಜೆಪಿ ಕಾರ್ಯಕರ್ತರು ► ಜಿ.ಪಂ.ಮಾಜಿ ಸದಸ್ಯರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ

(ನ್ಯೂಸ್ ಕಡಬ) newskadaba.com ಸವಣೂರು, ಮೇ.4. ಪುಣ್ಚಪ್ಪಾಡಿ ಗ್ರಾಮದ ಹಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‍ನ ಪ್ರಚಾರ ಸಭೆಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಶಾಸಕ ಅಂಗಾರ ಅವರ ಅಭಿವೃದ್ದಿ ಕುರಿತ ನಿಷ್ಕ್ರೀಯತೆಯಿಂದ ಮನನೊಂದು ಕಾಂಗ್ರೆಸ್ ಮುಖಂಡರಾದ ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ, ಮಾಜಿ ಗ್ರಾ.ಪಂ.ಸದಸ್ಯ ಸುದರ್ಶನ್ ನಾೈಕ್ ಕಂಪ, ಜಿ.ಪಂ.ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ ಅವರ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಗೊಂಡರು. ಪದ್ಮನಾಭ ಗೌಡ ಬೊಳ್ಳಾಜೆ, ಕರುಣಾಕರ ಗೌಡ ಸಾರಕರೆ, ಸಚಿನ್ ನಾಯ್ಕ ಕಾರೆತ್ತೋಡಿ, ಗಣೇಶ್ ನಾಯ್ಕ ಕಾರೆತ್ತೋಡಿ, ರಾಮಕೃಷ್ಣ ಗೌಡ ಅಂಜಯ, ಜೀವಿತ್ ಆಚಾರ್ಯ ಕುಮಾರಮಂಗಲ, ಅವಿನಾಶ್ ಮುಗೇರ ಓಡಂತರ್ಯ, ರಾಘವೇಂದ್ರ ಗೌಡ ಕೊಳಂಬೆತ್ತಡ್ಕ, ಲೋಕೇಶ್ ಗೌಡ ಕುಮಾರಮಂಗಲ ಮೊದಲಾದವರು ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾದರು.

Also Read  ಮಂಗಳೂರು: ಎರಡುಪ್ರತ್ಯೇಕ ಪ್ರಕರಣ ➤ ಪಿಎಸ್ಐ ಸೇರಿದಂತೆ ಆರು ಮಂದಿ ಪೊಲೀಸ್ ಸಿಬ್ಬಂದಿಗಳ ಅಮಾನತು

ಚುನಾವಣೆಯ ಸಮಯದಲ್ಲಿ ನಮ್ಮ ನೆನಪಾಗುತ್ತದೆ: ಈ ಸಂದರ್ಭ ಸಚಿನ್ ನಾಯ್ಕ ಕಾರೆತ್ತೋಡಿ ಮಾತನಾಡಿ, ಕಳೆದ 25 ವರ್ಷಗಳಿಂದಲೂ ಶಾಸಕರಾಗಿರುವ ಅಂಗಾರ ಅವರು ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ನಮ್ಮ ನೆನಪಾಗುತ್ತದೆ. ಸವಣೂರು – ಕುಮಾರಮಂಗಲ – ಮಾಡಾವು ರಸ್ತೆಯ ದುರಸ್ತಿಗಾಗಿ ಬಿಜೆಪಿಯ ವತಿಯಿಂದ ಪ್ರತಿಭಟನೆ ನಡೆಸಿದರೂ ಪ್ರತಿಕ್ರಿಯಿಸದ ಶಾಸಕರ ಕಾರ್ಯವೈಖರಿಗೆ ಬೇಸತ್ತು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದೇವೆ ಮತ್ತು ಡಾ.ರಘು ಅವರ ಗೆಲುವಿಗಾಗಿ ನಾವು ಶ್ರಮಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಬಾಲಕೃಷ್ಣ ಮಡಿವಾಳ, ದಾಮೋದರ ಕನ್ಯಾಮಂಗಲ, ಗಿರೀಶ್ ಕೆ.ಕನ್ಯಾಮಂಗಲ, ಪ್ರಶಾಂತ ಕುಮಾರಮಂಗಲ, ಯಾದವ ಬಾಳೆಹಿತ್ಲು, ಶೇಖರ ಓಡಂತರ್ಯ, ರಘುನಾಥ ನಾಯ್ಕ, ಜಯರಾಮ ನಾಯ್ಕ ಕಾರೆತ್ತೋಡಿ,ಸಂಪತ್(ಮಣಿ) ಓಡಂತರ್ಯ, ಗಣೇಶ್ ತೊಡಿಕ್ಕಾನ ಮೊದಲಾದವರು ಉಪಸ್ಥಿತರಿದ್ದರು.

Also Read  Breaking - 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ - ಬಾಲಕಿ ಏಳು ತಿಂಗಳ ಗರ್ಭಿಣಿ

error: Content is protected !!
Scroll to Top