(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಮೇ.1. ಬೆಥನಿ ಪದವಿ ಪೂರ್ವ ಕಾಲೇಜು, ನೂಜಿಬಾಳ್ತಿಲ ಇದರ ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ ಒಟ್ಟು 19 ವಿದ್ಯಾರ್ಥಿಗಳು ಹಾಜರಾಗಿದ್ದು ಈ ಪೈಕಿ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗು 15 ವಿದ್ಯಾರ್ಥಿಗಳು ದ್ವೀತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗ:
ಆಶ್ವಿನಿ ಎಸ್ 490 ಅಂಕಗಳು (ಶಶಿಧರ ಹಾಗೂ ಸುಧಾಮಣಿ ದಂಪತಿಗಳ ಪುತ್ರಿ )
ರಕ್ಷಿತ್ ಕುಮಾರ್ 458 ಅಂಕಗಳು (ರಾಮಕೃಷ್ಣ ಹಾಗೂ ಚಂದ್ರಾವತಿ ದಂಪತಿಗಳ ಪುತ್ರ)
ಮಧುರಾ ಎಸ್. ಜೆ 456 ಅಂಕಗಳು (ಬಾಲಕೃಷ್ಣ ಗೌಡ ಹಾಗೂ ಹೇಮಾವತಿ ದಂಪತಿಗಳ ಪುತ್ರಿ)
ಕಲಾ ವಿಭಾಗ:
ರಂಜಿತಾ ಕೆ 440 ಅಂಕಗಳು (ವೆಂಕಪ್ಪ ಗೌಡ, ಚಂದ್ರಾವತಿ ದಂಪತಿಗಳ ಪುತ್ರಿ)
ನಿತಿನ್ ಕುಮಾರ್ 439 ಅಂಕಗಳು (ಪುಟ್ಟಣ್ಣ, ಮೋಹಿನಿ ದಂಪತಿಗಳ ಪುತ್ರ)