ಅರಶಿನ, ಕುಂಕುಮ ಬಗ್ಗೆ ಬಾನು ಮುಷ್ತಾಕ್‌ಗೆ ದ್ವೇಷದ ಭಾವನೆ ಇದೆ: ಪ್ರತಾಪ್‌ ಸಿಂಹ



(ನ್ಯೂಸ್‌ ಕಡಬ) newskadaba.com, ಆ.27: ಅರಶಿನ, ಕುಂಕುಮದ ಬಗ್ಗೆ ಬಾನು ಮುಷ್ತಾಕ್ಅವರಿಗೆ ಏಕೆ ತಕರಾರು?. ಹಿಂದೂಗಳ ಮನೆಯಲ್ಲಿ ಯಾರೇ ಸುಮಂಗಲಿ ಹೋದರೂ ಕುಂಕುಮ ಕೊಡುತ್ತಾರೆ. ದೇವಾಲಯಕ್ಕೆ ಹೋದರೆ ಕುಂಕುಮ, ಪ್ರಸಾದ ನೀಡುತ್ತಾರೆ. ಇಂತ ಕುಂಕುಮವೇ ಬಾನು ಮುಷ್ತಾಕ್ಅವರಿಗೆ ಕಿರಿಕಿರಿ ಉಂಟು ಮಾಡಿದೆ. ಅರಶಿನ ಕುಂಕುಮದ ಬಗ್ಗೆ ಅವರಿಗೆ ದ್ವೇಷದ ಭಾವನೆ ಇದೆ ಎಂದು ಮಾಜಿ ಸಂಸದ ಪ್ರತಾಪ್ಸಿಂಹ ಹೇಳಿದ್ದಾರೆ.





ಮೈಸೂರಿನಲ್ಲಿ ಮಾತನಾಡಿದ ಅವರು, ಮುಸ್ಲಿಂ ಎನ್ನುವ ಕಾರಣಕ್ಕೆ ಅವರನ್ನು ವಿರೋಧಿಸುತ್ತಿಲ್ಲ. ಬಾನು ಮುಷ್ತಾಕ್ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಕರೆಯಿರಿ ಎಂದು ಯಾವ ಮುಸ್ಲಿಮರು ಕೇಳಿರಲಿಲ್ಲ. ಆದರೂ ಸಿಎಂ ಸಿದ್ದರಾಮಯ್ಯ ಅವರು ಕರೆಸಿದ್ದಾರೆ. ಬಾನು ಮುಷ್ತಾಕ್ಅವರಿಗೆ ನೇರವಾದ ಪ್ರಶ್ನೆ ಕೇಳುತ್ತೇನೆ. ಜನ ಸಾಹಿತ್ಯ ಭಾಷಣದಲ್ಲಿ ನಿಮ್ಮ ಭಾಷಣ ಏನಿತ್ತು?. ಮುಸ್ಲಿಮರು ಕನ್ನಡ ಕಲಿಯಲು ಭುವನೇಶ್ವರಿ ತಾಯಿ ಮೂರ್ತಿ ಅಡ್ಡಿಯಾಯಿತು ಎಂದು ಅವರು ಹೇಳಿದ್ದಾರೆ.ಭುಮನೇಶ್ವರಿಗೆ ಅರಶಿನ, ಕುಂಕುಮ ಇಟ್ಟಿದ್ದ ಕಾರಣ ಮುಸ್ಲಿಮರಿಗೆ ಕನ್ನಡ ಕಲಿಯಲು ಆಗಿಲ್ಲ ಎಂದು ಮುಷ್ತಾಕ್ಹೇಳಿದ್ದು ಸತ್ಯ ತಾನೆ ಎಂದು ಪ್ರಶ್ನಿಸಿದ್ದಾರೆ.






ನೀವು ನಂಬಿರುವ ನಿಮ್ಮ ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳುವುದಿಲ್ಲ. ನಮ್ಮ ದೇವರು ಹೇಗೆ ಕರೆಸಿ ಕೊಳ್ಳುತ್ತಾರೆ. ತಮಿಳುನಾಡಿನಲ್ಲಿ ಮುಸ್ಲಿಮರಿಗೆ ಮಾತೃ ಭಾಷೆ ತಮಿಳು. ಕರ್ನಾಟಕದಲ್ಲಿ ಏಕೆ ಮುಸ್ಲಿಮರಿಗೆ ಮಾತೃ ಭಾಷೆ ಕನ್ನಡ ಆಗುವುದಿಲ್ಲ. ಇಸ್ಲಾಂ, ಕ್ರಿಶ್ಚಿಯನ್ಆಕ್ರಮಣಕಾರಿ ಆಗಿ ಭಾರತಕ್ಕೆ ಬಂದವರು. ನಮ್ಮ ಆಚಾರ, ವಿಚಾರ, ಸಂಸ್ಕೃತಿಯನ್ನು ಕೆಡವಲು ಯತ್ನಿಸಿದ್ದು, ಘಜ್ನಿ, ಮೊಗಲರು. ಇದೇ ರೀತಿ ಬಾನು ಮುಷ್ತಾಕ್ನಮ್ಮ ನಂಬಿಕೆಯನ್ನು ಒಡೆಯುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

error: Content is protected !!
Scroll to Top