ಇಂದು ಹೆಬ್ಬಾಳ ಮೇಲ್ಸೇತುವೆ ಉದ್ಘಾಟನೆ



(ನ್ಯೂಸ್‌ ಕಡಬ) newskadaba.com, ಆ.18:‌‌ ಬೆಂಗಳೂರಿನ ಹೆಬ್ಬಾಳ ಭಾಗದ ಟ್ರಾಫಿಕ್ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುತ್ತಿದೆ. ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಇಂದು ಉದ್ಘಾಟನೆಗೊಳ್ಳಲಿದೆ. ಇಂದು ಬೆಳಗ್ಗೆ 10.30 ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ಮೇಲ್ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಕಳೆದ 20 ವರ್ಷಗಳಿಂದ ಬಿಡಿಎ ಹೆಬ್ಬಾಳ ವಿಸ್ತರಿತ ಫ್ಲೈ ಓವರ್ಕಾಮಗಾರಿ ನಡೆಸುತ್ತಾ ಇತ್ತು. ಇದೀಗ ಇದರ ಕಾಮಗಾರಿ ಪೂರ್ಣಗೊಂಡಿದೆ. ಉದ್ಘಾಟನೆಗೆ ಸಿದ್ದವಾಗಿದ್ದು, ಫ್ಲೈಓವರ್ನ್ನು ಹೂವಿನ ಹಾರ ಹಾಕಿ ಸಿಂಗಾರ ಮಾಡಲಾಗಿದೆ. ಫ್ಲೈ ಓವರ್‌ 700 ಮೀಟರ್ಇದ್ದು, ಕೆ.ಆರ್‌.ಪುರಂ ಕಡೆಯಿಂದ ಮೇಖ್ರಿ ಸರ್ಕಲ್ಕಡೆಗೆ ಸಾಗಲಿದೆ. ಫ್ಲೈಓವರ್ಸಂಚಾರ ಮುಕ್ತಗೊಂಡ ಬಳಿಕ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಯಾಗಲಿದೆ.







error: Content is protected !!
Scroll to Top