ಅರಮನೆಯಲ್ಲಿ ದಸರಾ ಗಜಪಡೆಗೆ ರಾಜಾತಿಥ್ಯ



(ನ್ಯೂಸ್‌ ಕಡಬ) newskadaba.com, ಆ.17:‌ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಗೆ ಭರದಿಂದ ಸಿದ್ದತೆಗಳು ನಡೆಯುತ್ತಿವೆ. ಕ್ಯಾಪ್ಟನ್ಅಭಿಮನ್ಯು ನೇತೃತ್ವದ 14 ಆನೆಗಳಿಗೆ ಅರಮನೆಯಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ.







ಆನೆಗಳ ಶಕ್ತಿ ವೃದ್ದಿ, ತೂಕ ಹೆಚ್ಚಳಕ್ಕೆ ದಿನಕ್ಕೆ 2 ಬಾರಿ ವಿಶೇಷ ಪೌಷ್ಟಿಕ ಆಹಾರಗಳನ್ನು ನೀಡಲಾಗುತ್ತಿದ್ದು, ಪ್ರತ್ಯೇಕ ವಿಶೇಷ ಅಡುಗೆ ಕೋಣೆ ನಿರ್ಮಾಣ ಮಾಡಲಾಗಿದೆ. ಆನೆಗಳ ಆಹಾರದ ಒಟ್ಟು ವೆಚ್ಚ 55 ರಿ 60 ಲಕ್ಷ ರೂ.






ಆನೆಗಳ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಇದಕ್ಕಾಗಿ ಅಡುಗೆ ತಯಾರಕರ ತಂಡವೇ ಇದೆ. ಒಂದು ಆನೆಗೆ ಸುಮಾರು 10 ಕೆಜಿಯಷ್ಟು ಆಹಾರ ನೀಡಲಾಗುತ್ತಿದೆ.

ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ತಾಲೀಮು ಮುಗಿಸಿ ಬಂದ ಆನೆಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಹಸಿರು ಕಾಳು ಸೇರಿದಂತೆ ವಿವಿಧ ಬಗೆಯ ವಿಶೇಷ ಆಹಾರ ಧಾನ್ಯಗಳನ್ನು ಆನೆಗಳಿಗೆ ನೀಡಲಾಗುತ್ತಿದೆ.ಮೂಲಂಗಿ, ಸೌತೆಕಾಯಿ, ಕ್ಯಾರೆಟ್ಸೇರಿದಂತೆ ವಿವಿಧ ತರಕಾರಿಗಳನ್ನು ಬೇಯಿಸಿ ದೊಡ್ಡ ದೊಡ್ಡ ತಟ್ಟೆಗಳಲ್ಲಿ ಇಟ್ಟು ಉಂಡೆ ಕಟ್ಟಿ ಆನೆಗಳಿಗೆ ನೀಡಲಾಗುತ್ತದೆ.

error: Content is protected !!
Scroll to Top