ಮಂಗಳೂರು: ಮೀನುಗಾರಿಕಾ ಕಾಲೇಜಿನಲ್ಲಿ ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com ಮಂಗಳೂರು,  ಎ.14. ಮಂಗಳೂರಿನ ಮೀನುಗಾರಿಕಾ ಕಾಲೇಜಿನ ವಾರ್ಷಿಕೋತ್ಸವವು ಇತ್ತೀಚೆಗೆ ನೆರವೇರಿತು. ಉದ್ಘಾಟನೆಯನ್ನು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರಿನ ಕುಲಪತಿಗಳಾದ ಡಾ. ಹೆಚ್.ಡಿ. ನಾರಾಯಣ ಸ್ವಾಮಿ ನೆರವೇರಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ದೇಶ ಎದುರಿಸುತ್ತಿರುವ ಆಹಾರ ಸಮಸ್ಯೆಗೆ ಮತ್ಸ್ಯೋದ್ಯಮವು ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಅಭಿಪ್ರಾಯ ಪಟ್ಟರು. ಪೈಪೋಟಿಯ ಈ ಜಗತ್ತಿನಲ್ಲಿ ಶೃದ್ಧೆಯಿಂದ ಓದಿ ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲ ಡಾ. ಎನ್. ಕೆ. ವಿಜಯನ್ ಅವರು ಮೀನುಗಾರಿಕೆ ಕಾಲೇಜಿನ ಕೊಡುಗೆಯನ್ನು ಸ್ಮರಿಸಿ ಸಂಸ್ಥೆ ಆಚರಿಸುತ್ತಿರುವ ಸ್ವರ್ಣಮಹೋತ್ಸವದ ಈ ಸಂದರ್ಭದಲ್ಲಿ ಕಾಲೇಜಿನ ಅಭಿವೃದ್ಧಿಗೆ ಕಾರಣಕರ್ತರಾದ ಎಲ್ಲಾ ಹಿರಿಯ ಚೇತನಗಳನ್ನು ಸ್ಮರಿಸಿ ಸಂಸ್ಥೆಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಸಲಹೆ ನೀಡಿದರು. ಸಮಾರಂಭದಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಹೆಚ್. ಶಿವನಂದಮೂರ್ತಿ, ಸಂಶೋಧನಾ ನಿರ್ದೇಶಕ ಡಾ. ಬಿ.ವಿ.ಶಿವಪ್ರಕಾಶ್, ವಿಸ್ತರಣಾ ನಿರ್ದೇಶಕ ಡಾ. ಯು.ಎಸ್. ಬಿರಾದರ್ ಉಪಸ್ಥಿತರಿದ್ದರು.

Also Read  ಆ. 29 ರಂದು ಮನಪಾ ಸಾಮಾನ್ಯ ಸಭೆ

ಕಾಲೇಜಿನ ಡೀನ್, ಡಾ. ಎಮ್ .ಎನ್. ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಲಹೆಗಾರ ಡಾ. ಶಶಿಧರ್ ಬಾದಾಮಿ ಸ್ವಾಗತಿಸಿ, ವಿದ್ಯಾರ್ಥಿ ಸಲಹೆಗಾರರಾದ ಡಾ. ಮೃದುಲಾ ರಾಜೇಶ್ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ. ಚನ್ನೇಶ್.ಜಿ ವಂದಿಸಿದರು. ವಿವಿಧ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

Also Read  ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಸಹಭಾಗಿತ್ವದಲ್ಲಿ►ಜಲಕೃಷಿಯಲ್ಲಿ ಉದ್ಯಮ ಶೀಲತೆಯ ಕಲಿಕೆಯೊಂದಿಗೆ ಕ್ಷೇತ್ರ ಭೇಟಿಯ ಅಧ್ಯಯನ

error: Content is protected !!
Scroll to Top