ಕಡಬದಲ್ಲಿ ಆರ್‌ಎಎಫ್ ಪಡೆಯಿಂದ ಪಥ ಸಂಚಲನ



(ನ್ಯೂಸ್ ಕಡಬ) newskadaba.com ಕಡಬ, ಆ.05. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳವಾರದಂದು ಕಡಬ ಪೇಟೆಯಲ್ಲಿ ಆರ್‌ಎಎಫ್ ಪಡೆಯಿಂದ ಪಥ ಸಂಚಲನ ನಡೆಯಿತು.





ಆರ್‌ಎಎಫ್ ಪಡೆಯ ಜೊತೆಗೆ ಕಡಬ ಪೊಲೀಸರು ಪಥ ಸಂಚಲನದಲ್ಲಿ ಭಾಗಿಯಾದರು. ಪಥ ಸಂಚಲನವು ಕಡಬ ಅನುಗ್ರಹ ಸಭಾಭವನ ಹಾಲ್ ಸಮೀಪದಿಂದ ಪ್ರಾರಂಭವಾಗಿ, ಪೇಟೆಯ ಮುಖಾಂತರ ಸಾಗಿದ್ದು ಸೈಂಟ್ ಜೋಕಿಂ ಚರ್ಚ್ ವರೆಗೆ ನಡೆಯಿತು. ಸಾರ್ವಜನಿಕರಲ್ಲಿ ಭದ್ರತೆ ಹಾಗೂ ವಿಶ್ವಾಸ ಮೂಡಿಸುವ ಉದ್ದೇಶದಿಂದ ಪಥ ಸಂಚಲನ ನಡೆಯಿತು.






ಈ ಸಂದರ್ಭದಲ್ಲಿ ಆರ್‌ಎಎಫ್ ಡಿವೈಎಸ್ಪಿ ಅನಿಲ್ ಜಾದವ್, ಇನ್ಸ್‌ಪೆಕ್ಟರ್ ಜಿ. ಮನೋಹರನ್ ಕಡಬ ಠಾಣಾಧಿಕಾರಿ ಅಭಿನಂದನ್ ಎಂಎಸ್, ಅಕ್ಷಯ್ ಡವಗಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!
Scroll to Top