ಕಡಬ: ಸರಸ್ವತೀ ವರ್ತುಲ ಕಾರ್ಯಗಾರ

(ನ್ಯೂಸ್ ಕಡಬ) newskadaba.com ಕಡಬ, ಎ.11. ಸರಸ್ವತೀ ವರ್ತುಲದ ಕಾರ್ಯಗಾರವು ಕೇವಳದ ಸರಸ್ವತೀ ವಿದ್ಯಾಲಯ ಪ್ರೌಢ ಶಾಲೆಯ ಸಭಾಂಗಣದಲ್ಲಿ ಏಪ್ರಿಲ್ 7 ರಂದು ನಡೆಯಿತು.ಈ ಕಾರ್ಯಕ್ರಮವನ್ನು ಶ್ರೀ ಗೋಪಾಲ ಕೃಷ್ಣ ನಿವೃತ್ತ ಮುಖ್ಯಗುರುಗಳು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಬಿಳಿನೆಲೆ ಇವರು ಉದ್ಘಾಟಿಸಿ ಮಾತನಾಡಿದರು,ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ವಿಶೇಷವಾದ ಜವಾಬ್ದಾರಿಯನ್ನು ವಹಿಸಬೇಕು.ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು.ಅದೇ ರೀತಿ ಶಿಕ್ಷಕರು ನಿರಂತರ ಅಧ್ಯಯನ ಶಿಲರಾಗಬೇಕು ಎಂದು ಹೇಳಿದರು.

ಸಭಾಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಇವರು ಮಾತನಾಡಿ ವಿದ್ಯಾಭಾರತೀಯ ಅಡಿಯಲ್ಲಿ ಕೆಲಸ ಮಾಡುವ ಎಲ್ಲಾ ಸಂಸ್ಥೆಗಳು ಸಾಮಾಜಿಕ ದೃಷ್ಟಿಕೋನವನ್ನಿಟ್ಟುಕೊಂಡು ಕೆಲಸ ನಿರ್ವಹಿಸುತ್ತಿದೆ. ಆ ನಿಟ್ಟಿನಲ್ಲಿ ಶಿಕ್ಷಕರು ಕೆಲಸ ಮಾಡಬೇಕು ಎಂದರು. ಈ ಸಂಧರ್ಭದಲ್ಲಿ ಅತಿಥಿಗಳಾಗಿ ಮನಮೋಹನ್ ರೈ ಉದ್ಯಮಿಗಳು ಕಡಬ, ಉಮೇಶ್ ಪಟ್ಟೂರು, ಮಹಬಲ ಕಾರ್ತಿಕ್ ಪಟ್ಟೂರು, ಆಶಾ, ಪ್ರಕಾಶ್, ಗಣೇಶ್ ವಾಗ್ಲೆ, ಮಾಧವ ಕೋಲ್ಪೆ ಮುಖ್ಯ ಗುರುಗಳು ಸರಸ್ಪತೀ ಪ್ರಾಥಮಿಕ ಶಾಲೆ, ಶೈಲಶ್ರೀ ರೈ ಎಸ್. ಮುಖ್ಯ ಗುರುಗಳು ಸರಸ್ವತೀ ಪ್ರೌಢ ಶಾಲೆ ಉಪಸ್ಥತರಿದ್ದರು.

Also Read  ಆಲಂಕಾರಿನಲ್ಲಿ ಶತಾಕ್ಷಿ ಕ್ಲಿನಿಕ್ ಮತ್ತು ಕ್ಲಿನಿಕಲ್ ಲ್ಯಾಬೋರೇಟರಿ ಶುಭಾರಂಭ

ಕಾರ್ಯಕ್ರಮದಲ್ಲಿ ಶ್ರೀ ಚಂದ್ರಹಾಸ ಕೆ ಸರಸ್ವತೀ ವರ್ತುಲದ ಮುಖ್ಯಸ್ಥರು ಪ್ರಾಸ್ತವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮುಖ್ಯಗುರುಗಳಾದ ಶ್ರೀ ಶೈಲಶ್ರೀ ಮಾತಜಿ ವಂದಿಸಿ, ಲಕ್ಷೀಶ ಶ್ರೀಮಾನ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಬೆಳಗಿನಿಂದ ಸಂಜೆಯ ವರೆಗೆ ಕಸದಿಂದ ರಸ, ಪರಿಣಾಮಕಾರಿ ಬೋಧನೆಯಲ್ಲಿ ಶಿಕ್ಷಕನ ಪಾತ್ರ, ಸಮಾಜದಲ್ಲಿ ಶಿಕ್ಷಕನ ಪಾತ್ರ ಎಂಬ ವಿಷಯದ ಕುರಿತು ಅವಧಿಗಳು ನಡೆದವು. ಸಂಪನ್ಮೂಲ ವ್ಯಕ್ತಿಗಳಾಗಿ ಧನಂಜಯ ಮರ್ಕಂಜ, ಚಿತ್ರಕಲಾ ಶಿಕ್ಷಕರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳು ಸವಣೂರು , ಸವಣೂರಿನ ಪದವಿಪುರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ ವಿ ಸೂರ್ಯನಾರಾಯಣ ರಾವ್, ಸುಬ್ರಹಣ್ಯ ಪದವಿಪುರ್ವ ಮುಖ್ಯಗುರುಗಳಾದ ಯಶವಂತ ರೈ ಭಾಗವಹಿಸಿದರು.

ಸಮಾರೋಪ ಸಮಾರಂಭ
ಸರಸ್ವತೀ ವರ್ತುಲ ಕಾರ್ಯಗಾರ ಬೆಳಗ್ಗೆ 10.15ಕ್ಕೆ ಉದ್ಘಾಟನೆಗೊಂಡು ಸಂಜೆ 3.15ಕ್ಕೆ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹೇಶ್ ನಿಟಿಲಾಪುರ ಸರಸ್ವತೀ ಪದವಿಪುರ್ವ ವಿದ್ಯಾಲಯದ ಪ್ರಾಂಶುಪಾಲರು ವಿದ್ಯಾಭಾರತಿಯ ದ್ಯೇಯೋದ್ದೇಶಗಳನ್ನು ತಿಳಿಸಿದರು. ಇನ್ನೂರ್ವ ಅತಿಥಿಗಳಾದ ಗಂಗಾಧರ ಗೌಡ ಕುಂಡಡ್ಕ ಇವರು ಮಾತನಾಡಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿದ್ಯಾರ್ಥಿಗಳಿಗೆ ಅಡಿಗಲ್ಲು ಇದ್ದ ಹಾಗೆ ಈ ಹಂತದಲ್ಲಿ ಶಿಕ್ಷಣ ಸರಿ ಆದರೆ ಮುಂದೆ ಸಮಾಜ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ ಎಂದರು. ಸಭಾಧ್ಯಕ್ಷತೆಯನ್ನು ವಹಿಸಿದ ನಮ್ಮ ಸಂಸ್ಥೆಯ ಕೋಶಧಿಕಾರಿಗಳಾದ ಲಿಂಗಪ್ಪ ಜೆ ಇವರು ಶಿಕ್ಷಕ ವೃತ್ತಿಯ ಮಹತ್ವದ ಬಗ್ಗೆ ಹೇಳಿದರು.

Also Read  ಬಿಳಿನೆಲೆ: ಅಕ್ರಮ ಶೆಡ್ ವಿವಾದಕ್ಕೆ ತೆರೆ

ವೇದಿಕೆಯಲ್ಲಿ ಅತಿಥಿಗಳಾದ ಮಹೇಂದ್ರ ರಾಮ್ ಉದ್ಯಮಿಗಳು ಕಡಬ, ಶ್ರೀ ರವಿರಾಜ್ ಶೆಟ್ಟಿ ಕಡಬ ಅಧ್ಯಕ್ಷರು, ಶಿವಪ್ರಸಾದ್ ಮೈಲೇರಿ, ಸೀತಾರಾಮ ಎ, ಉಮೇಶ್ ಶೆಟ್ಟಿ ಸಾಯಿರಾಮ್ ಆಡಳಿತ ಮಂಡಳಿ ಸದಸ್ಯರು. ಸರಸ್ವತೀ ವರ್ತುಲದ ಮುಖ್ಯಸ್ಥರಾದ ಚಂದ್ರಹಾಸ ಕೆ.ಸಿ ಮತ್ತು ಮುಖ್ಯಗುರುಗಳಾದ ಶೈಲ ಶ್ರೀ ರೈ ಎಸ್, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಮಾಧವ ಕೋಲ್ಪೆ ಉಪಸ್ಥಿತರಿದ್ದರು. ಶಿಕ್ಷಕರು ಕಾರ್ಯಗಾರದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು .ಮುಖ್ಯಗುರುಗಳಾದ ಶೈಲಶ್ರೀ ರೈ ಎಸ್ ಸ್ವಾಗತಿಸಿ, ಲಕ್ಷ್ಮೀಶ ಗೌಡ ಆರಿಗ ವಂದಿಸಿ, ಸೌಮ್ಯ ಕೆ. ಎ. ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top